Friday, June 5, 2026
Homeಕರಾವಳಿಉಡುಪಿಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಶಾಲಾರಂಭ: ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ಸಮಯ ಕಳೆದ...

ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಶಾಲಾರಂಭ: ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ಸಮಯ ಕಳೆದ ಡಿಸಿ

- Advertisement -
- Advertisement -

ಉಡುಪಿ: ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಕೂಡಾ ಇಂದಿನಿಂದ ಶಾಲೆಗಳು ಆರಂಭವಾಗಿವೆ.

ಶಾಲೆಗಳಲ್ಲಿ ತೋರಣ ಕಟ್ಟಿ ವಿದ್ಯಾರ್ಥಿಗಳನ್ನು ಶಿಕ್ಷಕರು ಬರ ಮಾಡಿಕೊಂಡಿದ್ದಾರೆ.

ಶಾಲಾರಂಭದ ಹಿನ್ನಲೆಯಲ್ಲಿ ಉಡುಪಿ ಸರ್ಕಾರಿ ಪ್ರೌಢ ಶಾಲೆಗೆ ಡಿಸಿ ಕೂರ್ಮಾ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಕ್ಕಳ ಜೊತೆ ಕೆಲವು ಹೊತ್ತು ಕಾಲ‌ ಕಳೆದ ಜಿಲ್ಲಾಧಿಕಾರಿ, ತರಗತಿ ಹಾಗೂ ಶಾಲೆಯ ಅಡುಗೆ ಕೋಣೆ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ತರಗತಿ ದಾಖಲಾತಿಗೆ ಪೋಷಕರು ಆಸಕ್ತಿ ತೋರಿಸಿದ್ದು,
ಬೆಳಿಗ್ಗೆಯಿಂದಲೇ ಸರ್ಕಾರಿ ಶಾಲೆಗಳಲ್ಲಿ ಅಡ್ಮಿಷನ್ ಚುರುಕುಗೊಂಡಿದೆ.

ಎಂಟು ಹಾಗೂ ಒಂಬತ್ತನೇ ತರಗತಿ ‌ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ಮತ್ತು ಹತ್ತನೇ ತರಗತಿ ಮಕ್ಕಳಿಗೆ ಸೇತುಬಂಧ ಅಳವಡಿಕೆ ಮಾಡಲಾಗಿದೆ.

ಕೊರೋನಾ ಸಮಯದಲ್ಲಿ ಉಂಟಾದ ತರಗತಿ ವ್ಯತ್ಯಾಸವನ್ನು ಸರಿತೂಗಿಸಲು ಈ ವಿಶಿಷ್ಟ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.

- Advertisement -

Latest News

error: Content is protected !!