- Advertisement -
- Advertisement -
ಕೋಲ್ಕತ್ತಾ : ಬಂಗಾಳಿ ಮೂಲದ ಕಿರುತೆರೆ ನಟಿ ಪಲ್ಲವಿ ಡೇ ಅವರು ಕೋಲ್ಕಾತ್ತಾದ ಗರ್ಫಾ ಪ್ರದೇಶದಲ್ಲಿನ ತಮ್ಮ ಪ್ಲಾಟ್ ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಭಾನುವಾರದಂದು ಬೆಳಗ್ಗೆ ಪತ್ತೆಯಾಗಿದ್ದಾರೆ.
20 ವರ್ಷದ ಯುವ ನಟಿಯನ್ನು ಬಂಗೂರ್ ಆಸ್ಪತ್ರೆಗೆ ದಾಖಲಿಸಿದರು ಆಕೆ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಟಿಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ತನಿಖೆಯ ನಂತರ ಕಾರಣ ತಿಳಿಯಬೇಕಷ್ಟೇ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಅಸಹಜ ಸಾವು ಪ್ರಕರಣ ಎಂದು ಪೊಲೀಸರು ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದಾಖಲಿಸಲಾಗಿದೆ.
ನಟಿ ಪಲ್ಲವಿ ಡೇ ಅವರು ‘ರೇಶಮ್ ಜಪಿ’, ‘ಸರಸ್ವತಿ ಪ್ರೇಮ್’, ‘ಅಮಿ ಸಿರಾಜರ್ ಬೇಗಂ’, ‘ಮೊನ್ ಮನೆ ನಾ’ ಸಿನಿಮಾಗಳಲ್ಲಿಯೂ ನಟಿಸಿದ್ದರು.
- Advertisement -