Friday, June 5, 2026
Homeಕರಾವಳಿಉಡುಪಿಉಡುಪಿಯಲ್ಲಿ ಸೌಹಾರ್ದ ಪರ ಸಂಘಟನೆಗಳಿಂದ ಸಾಮರಸ್ಯ ನಡಿಗೆ

ಉಡುಪಿಯಲ್ಲಿ ಸೌಹಾರ್ದ ಪರ ಸಂಘಟನೆಗಳಿಂದ ಸಾಮರಸ್ಯ ನಡಿಗೆ

- Advertisement -
- Advertisement -

ಉಡುಪಿ: ಉಡುಪಿಯಲ್ಲಿ ಸೌಹಾರ್ದ ಪರ ಸಂಘಟನೆಗಳಿಂದ ಸಾಮರಸ್ಯ ನಡಿಗೆ ನಡೆದಿದೆ.

ಅಜ್ಜರಕಾಡಿನ ಹುತಾತ್ಮ ಸ್ಮಾರಕ ಚೌಕದ ಬಳಿ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಗಿದ್ದು, ನಡಿಗೆಯಲ್ಲಿ ನಾರಾಯಣ ಗುರು, ಡಾ. ಅಂಬೇಡ್ಕರ್, ಗಾಂಧೀಜಿ, ಸ್ವಾಮಿ ವಿವೇಕಾನಂದ, ಮದರ್ ತೆರೇಸಾ, ಹಾಜಿ ಅಬ್ದುಲ್ಲಾ, ಮಾಧವ ಮಂಗಲ, ಡಾ. ಟಿಎಂಎ ಪೈ ಪ್ರಾತ್ಯಕ್ಷಿಕೆ ಪ್ರದರ್ಶನ ನಡೆದಿದೆ.

ಕಲಾ ತಂಡಗಳಿಂದ ಕರ್ನಾಟಕ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾ ಪ್ರದರ್ಶನ ಕೂಡಾ ನಡೆದಿದ್ದು, ಉಡುಪಿ ನಗರ ವಿವಿಧ ಕಡೆಗಳಲ್ಲಿ ಸಾಮರಸ್ಯ ನಡಿಗೆ ಸಾಗಿದೆ.

ಬಳಿಕ ರಾಜ್ಯದ ಪ್ರಗತಿಪರ ಎಡಪಂಥೀಯ ಸಂಘಟನೆಗಳ ನೇತೃತ್ವದಲ್ಲಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಹಬಾಳ್ವೆ ಸಮಾವೇಶ ನಡೆದಿದೆ.

- Advertisement -

Latest News

error: Content is protected !!