Friday, June 5, 2026
Homeಕರಾವಳಿಕಡಬ: ಮೂರು ತಿಂಗಳ ಬಳಿಕ ಕಳ್ಳತನ ಆರೋಪಿಗಳು ಅಂದರ್

ಕಡಬ: ಮೂರು ತಿಂಗಳ ಬಳಿಕ ಕಳ್ಳತನ ಆರೋಪಿಗಳು ಅಂದರ್

- Advertisement -
- Advertisement -

 ಕಡಬ: ಮೂರು ತಿಂಗಳ ಹಿಂದೆ ಕಡಬ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಮನೆಗೆ ನುಗ್ಗಿ ನಗದು ಕಳವುಗೈದಿರುವ ಆರೋಪಿಯನ್ನು ಪೋಲೀಸರು ಮೇ.9ರಂದು ಬಂಧಿಸಿದ್ದಾರೆ.

ಮರ್ದಾಳ ನಿವಾಸಿ ಹಕೀಂ (23)  ಬಂಧಿತ ಆರೋಪಿ . ಕಳ್ಳತನಕ್ಕೆ ಸಹಕರಿಸಿದ  ಇನ್ನೋರ್ವ ಆರೋಪಿ ಹಮೀದ್(25) ನನ್ನು ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಪೋಲೀಸರು ಬಂಧಿಸಿದ್ದು, ಆತನನ್ನು ಕಡಬ ಪೋಲಿಸರು ಇನ್ನಷ್ಟೆ ವಶಕ್ಕೆ ಪಡೆಯಬೇಕಿದೆ.

ಫೆ 22 ರಂದು ರಾತ್ರಿ ಪಾಲೆತಡ್ಕ ನಿವಾಸಿ ಬಾಲಕೃಷ್ಣ ರೈಎಂಬವರ ಮನೆಯ ಹಿಂಬಾಗಿಲಿನಿಂದ ನುಗ್ಗಿ ಮನೆಯಲ್ಲಿದ್ದ 66,000 ರೂ ವನ್ನು ಕಳವುಗೈಯ್ಯಲಾಗಿತ್ತು. ಬಾಲಕೃಷ್ಣ ರೈ ಅವರಿಗೆ ಮರ್ದಾಳ ದಲ್ಲಿ ಅಂಗಡಿ ಇದ್ದು.ಇವರ ಚಲನವಲನಗಳ ಮೇಲೆ ನಿಗಾ ಇಟ್ಟು ಸಮಯ ಸಾಧಿಸಿ ಕಳ್ಳತನ ಗೈಯ್ಯಲಾಗಿತ್ತು.

ಹಕೀಂ ಮರ್ದಾಳದ ಹೋಟೇಲೊಂದರಲಿ ಕೆಲಸ ಮಾಡುತ್ತಿದ್ದು,  ಹಮೀದ್ ಅವರ ತಂದೆ ಕೂಡಾ ಅಲ್ಲೇ ಕೆಲ ನಿರ್ವಹಿಸುತ್ತಿದ್ದರು.  ಆಗಾಗ ಹೋಟೇಲ್ ಗೆ  ಬರುತ್ತಿದ್ದ ಹಮೀದ್ ಹಕೀಂನೊಂದಿಗೆ ಕಳ್ಳತನದ ವ್ಯವಹಾರ ಇಟ್ಟುಕೊಂಡಿದ್ದ. ಅಂತೆಯೇ ಬಾಲಕೃಷ್ಣ ರೈ ಅವರ ಮನೆಗೆ ಕನ್ನ ಹಾಕಲು ನಿರ್ಧರಿಸಿ ರಾತ್ರೋ  ರಾತ್ರಿ ಮನೆಗೆ ನುಗ್ಗಿ ಹಣ ಕಳವುಗೈದಿದ್ದರು.

- Advertisement -

Latest News

error: Content is protected !!