Saturday, June 27, 2026
Homeತಾಜಾ ಸುದ್ದಿಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ಪ್ರಿಯಕರನೊಂದಿಗೆ ಪರಾರಿ

ಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ಪ್ರಿಯಕರನೊಂದಿಗೆ ಪರಾರಿ

- Advertisement -
- Advertisement -

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಇತ್ತೀಚೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತನ್ನ ತಾಯಿಯೊಂದಿಗೆ ಬಂದಿದ್ದ ವಿದ್ಯಾರ್ಥಿನಿ ನೋಡ ನೋಡುತ್ತಿದ್ದಂತೆ ತಾಯಿ ಎದುರೇ ಪ್ರಿಯಕರನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾಳೆ.

ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು ಇನ್ನು ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮದ ಸುಜಾತ ಎಂಬುವರ ಪುತ್ರಿ ಪ್ರಿಯಕರನ ಜತೆ ನಾಪತ್ತೆಯಾಗಿದ್ದಾಳೆ.

ಪಿಯುಸಿ ಪರೀಕ್ಷೆಯು ನಡೆಯುತ್ತಿದ್ದರಿಂದ ಪರೀಕ್ಷೆ ಬರೆಯುವ ನೆಪದಲ್ಲಿ ತನ್ನ ತಾಯಿಯ ಜೊತೆ ಬಂದಿದ್ದಳು. ಆದರೆ ಮೊದಲೇ ಎಲ್ಲ ತಯಾರಿಯೊಂದಿಗೆ ಬಂದಿದ್ದ ಆಕೆ ತಾಯಿ ನೋಡನೋಡುತ್ತಿದ್ದಂತೆಯೇ ತನ್ನ ಪ್ರಿಯಕರನ ಜೊತೆ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದಾಳೆ.

- Advertisement -

Latest News

error: Content is protected !!