Sunday, June 7, 2026
Homeತಾಜಾ ಸುದ್ದಿಪುತ್ತೂರು: ಹಣದ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ

ಪುತ್ತೂರು: ಹಣದ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ

- Advertisement -
- Advertisement -

ಪುತ್ತೂರು: ಅಪ್ರಾಪ್ತ ಬಾಲಕಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಬಳಿ ಹಾಡುಹಗಲೇ ನಡೆದಿದೆ. ಗದಗ ಮೂಲದ ಹಿಂದೂ ಅಪ್ರಾಪ್ತ ಬಾಲಕಿ ಬಸ್ ನಿಲ್ದಾಣದ ಬಳಿ ಇದ್ದ ಸಂದರ್ಭದಲ್ಲಿ ಸರಳೀಕಟ್ಟೆ ನಿವಾಸಿ ನೌಫಲ್ ಎಂಬಾತ ಬಾಲಕಿಯ ಬಳಿ ಬಂದು ಹತ್ತು ನಿಮಿಷ ನನ್ನ ಜೊತೆ ಬರ್ತಿಯಾ, ನಾನು ನಿನಗೆ ಹಣ ಕೊಡುವೆ ಎಂದು ಅಮಿಷವೊಡ್ಡಿ ಬಾಲಕಿಯನ್ನು ತನ್ನ ಜೊತೆ‌ ಬರುವಂತೆ ಒತ್ತಾಯಿಸಿದ್ದಾನೆ. ಬಾಲಕಿ ಈ ವಿಚಾರವನ್ನು ತನ್ನ ಪೋಷಕರ ಬಳಿ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸರು ಪುತ್ತೂರು ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಹಿನ್ನಲೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿದ‌ ಪೋಲೀಸರು ಆರೋಪಿ ನೌಫಲ್ (28) ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಬಂಟ್ವಾಳ ತಾಲೂಕಿನ ಕನ್ಯಾನದ ದಲಿತ ಬಾಲಕಿ ಆತ್ಮಹತ್ಯೆ ಪ್ರಕರಣವು ತಣ್ಣಗಾಗುವ ಮೊದಲೇ ಇನ್ನೊಂದು ಪ್ರಕರಣ‌ ನಡೆದಿರುವುದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

- Advertisement -

Latest News

error: Content is protected !!