Sunday, August 30, 2026
Homeಕರಾವಳಿವಿಟ್ಲದಲ್ಲಿ ಮಹಿಳೆಯ ಕೊಲೆಗೆ ಯತ್ನಿಸಿದ ಆರೋಪಿಯ ಬಂಧನ

ವಿಟ್ಲದಲ್ಲಿ ಮಹಿಳೆಯ ಕೊಲೆಗೆ ಯತ್ನಿಸಿದ ಆರೋಪಿಯ ಬಂಧನ

- Advertisement -
- Advertisement -

ವಿಟ್ಲ: ಇಲ್ಲಿನ ಪುಣಚ ಗ್ರಾಮದ ಪರಿಯಾಲ್ತಡ್ಕ ಪೇಟೆಯಲ್ಲಿ ಎಲ್ಲದರ ಎದುರೇ ಮಹಿಳೆಯ ಮೇಲೆ ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಮಹಿಳೆಯ ಕೊಲೆಗೆ ಯತ್ನಿಸಿರುವ ಘಟನೆ ಸಂಬಂಧಪಟ್ಟಂತೆ, ಆರೋಪಿಯನ್ನು ಬಂಧಿಸಲಾಗಿದೆ.
ನಾಟೆಕಲ್ಲು ನವಗ್ರಾಮದ ಸೆಂಟ್ರಿಂಗ್ ಶೇಖರ ಅಲಿಯಾಸ್ ಶೇಖರ ಪೂಜಾರಿ(50) ಬಂಧಿತ ಆರೋಪಿ. ಇನ್ನು ಕೊಲೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಯನ್ನು ಬಂಧಿಸಿರುವ ವಿಟ್ಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಗಂಭೀರ ಗಾಯಗೊಂಡ ಮಹಿಳೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

- Advertisement -

Latest News

error: Content is protected !!