Monday, June 8, 2026
Homeಕರಾವಳಿಉಡುಪಿಕ್ರಿಮಿನಲ್ ಕೇಸ್ ಇದ್ದವರಿಗೆ ಬಿಜೆಪಿ ಪ್ರವೇಶಕ್ಕೆ ಅವಕಾಶವಿಲ್ಲ : ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ...

ಕ್ರಿಮಿನಲ್ ಕೇಸ್ ಇದ್ದವರಿಗೆ ಬಿಜೆಪಿ ಪ್ರವೇಶಕ್ಕೆ ಅವಕಾಶವಿಲ್ಲ : ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

- Advertisement -
- Advertisement -

ಉಡುಪಿ: ಕಾಂಗ್ರೆಸ್ ತ್ಯಜಿಸುವ ಹಲವಾರು ನಾಯಕರು ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ, ಮುಂದಿನ ದಿನಗಳಲ್ಲಿ ಹಲವಾರು ನಾಯಕರು ಬಿಜೆಪಿಯನ್ನು ಸೇರುತ್ತಾರೆ ಎಂದು ಕೇಂದ್ರ ಸಚಿವೆ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ‌

ಉಡುಪಿಯಲ್ಲಿ ಇಂದು ಮಾತನಾಡಿದ ಶೋಭಾ ಕರಂದ್ಲಾಜೆ, ಬಿಜೆಪಿಗೆ ಯಾರೇ ಬಂದರೂ ನಮ್ಮ ಬಾಗಿಲು ತೆರೆದಿದೆ. ಆದರೆ
ಕ್ರಿಮಿನಲ್ ಕೇಸು ಇದ್ದವರಿಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಕಾಲಕಾಲಕ್ಕೆ ನಮ್ಮ ಪಕ್ಷವನ್ನು ಸೇರುತ್ತಾರೆ. ಪ್ರಧಾನಿ ನರೇಂದ್ರ ಮೋದಿಗೆ ವಿದೇಶದಲ್ಲಿ ಅಪಾರ ಗೌರವ ಸಿಗುತ್ತಿದೆ. ನರೇಂದ್ರ ಮೋದಿ ನೇತೃತ್ವವನ್ನು ಒಪ್ಪಿ ಹಲವಾರು ಜನ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಶೋಭಾ ಹೇಳಿದ್ದಾರೆ.

ಇನ್ನು ಒಳ ಜಗಳದಿಂದ ರಾಜ್ಯ ಕಾಂಗ್ರೆಸ್ ಅವನತಿಯತ್ತ ಸಾಗಿದ್ದು, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ನೇತೃತ್ವದ ಇಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

- Advertisement -

Latest News

error: Content is protected !!