Sunday, June 7, 2026
Homeಕರಾವಳಿಪಿಲಿಕುಳಕ್ಕೆ ಅಪರೂಪದ ಬಿಳಿ ಹೆಣ್ಣು ಹುಲಿ ಕಾವೇರಿ ಆಗಮನ

ಪಿಲಿಕುಳಕ್ಕೆ ಅಪರೂಪದ ಬಿಳಿ ಹೆಣ್ಣು ಹುಲಿ ಕಾವೇರಿ ಆಗಮನ

- Advertisement -
- Advertisement -

ಮಂಗಳೂರು: ನಗರದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಪರೂಪದ ಬಿಳಿ ಹೆಣ್ಣು ಹುಲಿಯೊಂದನ್ನು ತರಲಾಗಿದೆ.


ಜೊತೆಗೆ, ಹೆಣ್ಣು ಉಷ್ಟ್ರಪಕ್ಷಿಯೂ ಬಂದಿದೆ. ಚೆನ್ನೈನ ಅರಿಗ್ನರ್ ಅಣ್ಣಾಮೃಗಾಲಯದಿಂದ ಕಾವೇರಿ ಹೆಸರಿನ ಹುಲಿಯನ್ನು ತರಿಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಡಿ ಚೆನ್ನೈನ ಅರಿಗ್ನರ್ ಅಣ್ಣಾಮೃಗಾಲಯದಿಂದ ಒಂದು ಬಿಳಿ ಹುಲಿ ಜೊತೆಗೆ ಉಷ್ಟ್ರಪಕ್ಷಿಯನ್ನು ತರಲಾಗಿದೆ.


ಅದೇ ರೀತಿ ಪಿಲಿಕುಳ ಜೈವಿಕ ಉದ್ಯಾನವನದಿಂದ ಅರಿಗ್ನರ್ ಅಣ್ಣಾಮೃಗಾಲಯಕ್ಕೆ ಒಂದು ಬೆಂಗಾಲ್ ಹುಲಿ, ನಾಲ್ಕು ಕಾಡುನಾಯಿಗಳು ಹಾಗೂ ಹಾವುಗಳನ್ನು ಕಳುಹಿಸಿ ಕೊಡಲಾಗುತ್ತಿದೆ.ಸದ್ಯಬಿಳಿ ಹುಲಿಯನ್ನು ಕ್ವಾರೆಂಟೈನ್‌ನಲ್ಲಿ ಪ್ರತ್ಯೇಕಿಸಿಡಲಾಗಿದೆ. ಸ್ಥಳೀಯ ವಾತಾವರಣಕ್ಕೆ ಒಗ್ಗಿದ ಬಳಿಕವೇ ಸಾರ್ವಜನಿಕರ ವೀಕ್ಷಣೆಗೆ ಸಿಗಲಿದೆ ಎಂದು ಹೇಳಲಾಗಿದೆ.ಕಾವೇರಿ ಪಿಲಿಕುಳದ ಮೊದಲ ಬಿಳಿ ಹುಲಿಯಾಗಲಿದೆ.


ಕೆಲವೇ ದಿನಗಳಲ್ಲಿ ಮತ್ತೊಂದು ಗಂಡು ಹುಲಿಯನ್ನು ತರಲಾಗುತ್ತದೆ. ಮುಂದಿನ ದಿನಗಳಲ್ಲಿ ಗುಜರಾತ್‌ನ ರಾಜ್‌ಕೋಟ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹ, ಭಾರತೀಯ ತೋಳಗಳು ಮತ್ತು ಹಲವು ಅಪರೂಪದ ಪಕ್ಷಿಗಳು ಮತ್ತು ಮಹಾರಾಷ್ಟ್ರದ ಗೋರೆವಾ ಮೃಗಾಲಯದಿಂದ ಬಿಳಿ ಕೃಷ್ಣಮೃಗಗಳು ಹಾಗೂ ಕರಡಿಗಳು, ಒಡಿಶಾದ ನಂದನಕಾನನ ಮೃಗಾಲಯದಿಂದ ಅಪರೂಪದ ಹೋಗ್ ಜಿಂಕೆ, ನೀಲಗಾಯಿಗಳು ಹಾಗೂ ಪಕ್ಷಿಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿ ಪಿಲಿಕುಳಕ್ಕೆ ತರಿಸಿಕೊಳ್ಳುವಯೋಜನೆ ಇದೆ.

- Advertisement -

Latest News

error: Content is protected !!