Wednesday, June 3, 2026
Homeತಾಜಾ ಸುದ್ದಿಸದ್ಯಕ್ಕಿಲ್ಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಂಪುಟ ಪುನರ್ ರಚನೆಯಾದರೆ ಮೂರಿಂದ ನಾಲ್ಕು ಮಂದಿಗೆ ಡಿಸಿಎಂ ಪಟ್ಟ

ಸದ್ಯಕ್ಕಿಲ್ಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಂಪುಟ ಪುನರ್ ರಚನೆಯಾದರೆ ಮೂರಿಂದ ನಾಲ್ಕು ಮಂದಿಗೆ ಡಿಸಿಎಂ ಪಟ್ಟ

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆರೆ ಎಳೆದಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಜೆಪಿ ವರಿಷ್ಠರು, ರಾಜ್ಯ ಸಚಿವ ಸಂಪುಟಕ್ಕೆ ಹೊಸ ಖದರು ಕೊಡಲು ನಿಶ್ಚಯಿಸಿದ್ದಾರೆ.

ಸಿಎಂ ಬೊಮ್ಮಾಯಿ ಜತೆ ನಡೆಸಿದ ಖಾಸಗಿ ಮಾತುಕತೆ ವೇಳೆ, ‘ಉತ್ತಮ ಕಾರ್ಯಕ್ರಮಗಳನ್ನು ನೀಡಿ ಸರ್ಕಾರವನ್ನು ಮುನ್ನಡೆಸುತ್ತಿದ್ದೀರಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಅಭಿವೃದ್ಧಿಗೆ ವೇಗ ನೀಡಿ. ನಿಮ್ಮ ಜತೆ ನಾವು ನಿಲ್ಲುತ್ತೇವೆ’ ಎಂದು ಶಾ ಭರವಸೆ ನೀಡಿದ್ದಾರೆ. ಹೀಗಾಗಿ, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಖಚಿತ’ ಎಂದು ಮೂಲಗಳು ಹೇಳಿವೆ.

ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಸಂಪುಟ ಪುನರ್‌ರಚನೆ ಯತ್ತ ಬಿಜೆಪಿ ವರಿಷ್ಟರು ಚಿತ್ತ ಹರಿಸಿದ್ದಾರೆ. ಹೀಗಾಗಿ, 4 ರಿಂದ 5 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವುದು ಖಚಿತ. ಪುನರ್‌ ರಚನೆ ವೇಳೆ ಮೂರರಿಂದ ನಾಲ್ಕು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನ ದಕ್ಕುವ ಸಾಧ್ಯತೆ ಇದೆ.

- Advertisement -

Latest News

error: Content is protected !!