Saturday, June 6, 2026
Homeಕರಾವಳಿಉಡುಪಿಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ : ದೆಹಲಿಗೆ ತೆರಳಲು ಸಿದ್ದವಾಗಿರುವ ಉಡುಪಿಯ ಪೊಲೀಸರ ತಂಡ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ : ದೆಹಲಿಗೆ ತೆರಳಲು ಸಿದ್ದವಾಗಿರುವ ಉಡುಪಿಯ ಪೊಲೀಸರ ತಂಡ

- Advertisement -
- Advertisement -

ಉಡುಪಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ತೆರಳಲು ಉಡುಪಿಯ ಪೊಲೀಸರ ತಂಡ ಸಿದ್ಧವಾಗಿ ನಿಂತಿದೆ.

ಪ್ರಕರಣದ ತನಿಖೆಗಾಗಿ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಏಪ್ರಿಲ್ 12ರಂದು ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದರು, ಆತ್ಮಹತ್ಯೆಗೆ ಕೆಲ ಸಮಯದಿಂದ ಹಿಂದೆ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು,

ದೆಹಲಿಯ ಬಿಜೆಪಿ ನಾಯಕರನ್ನು ಭೇಟಿಯಾಗಲು ಯತ್ನಿಸಿದ್ದರು ಸಂತೋಷ್ ಪಾಟೀಲ್. ಅಲ್ಲದೇ ದೆಹಲಿಯಲ್ಲಿ ಎರಡು ಮೂರು ದಿನಗಳ ಕಾಲ ಓಡಾಟ ನಡೆಸಿದ್ದರು.  ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಸಾವಿಗೂ ಮುನ್ನ ಸಂತೋಷ್ ಪಾಟೀಲ್ ಭೇಟಿಯಾಗಿದ್ದ ವ್ಯಕ್ತಿಗಳ ವಿಚಾರಣೆ ನಡೆಸಲಿದ್ದಾರೆ ಉಡುಪಿ ಪೊಲೀಸರು.

- Advertisement -

Latest News

error: Content is protected !!