Sunday, June 7, 2026
Homeಕರಾವಳಿಕಡಬ: ಹೊಸಮಠ ದೇರಾಜೆ ಕ್ರಾಸ್ ಬಳಿ ಕಾರು ಅಪಘಾತ

ಕಡಬ: ಹೊಸಮಠ ದೇರಾಜೆ ಕ್ರಾಸ್ ಬಳಿ ಕಾರು ಅಪಘಾತ

- Advertisement -
- Advertisement -

ಕಡಬ: ಇಲ್ಲಿನ ಹೊಸಮಠ ಸಮೀಪದ ದೇರಾಜೆ ಕ್ರಾಸ್ ನಲ್ಲಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ. ಕಾರಿನಲ್ಲಿದ್ದ ಕಡಬ ಸಮೀಪದ ಹರೀಶ್ ಕಂಗುಳೆ ಮತ್ತು ಧನ್ವಿತ್ ಗಾಯಗೊಂಡಿದ್ದಾರೆ. ಕಾರು ಮರ್ದಾಳದ ಜೇಮ್ಸ್ ಎಂಬವರಿಗೆ ಸೇರಿದ್ದು ಎನ್ನಲಾಗಿದೆ.

ಕಡಬದಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕಾರನ್ನು ಕಡಬದಿಂದಲೇ ಶರವೇಗದಲ್ಲಿ ಚಾಲಕ ಚಲಾಯಿಸಿಕೊಂಡು ಬರುತ್ತಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ವೇಗದಲ್ಲಿದ್ದ ಕಾರು ಮೂರು ಪಲ್ಟಿಯಾಗಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ . ಓರ್ವನ ಕೈ ಗೆ ಗಂಭೀರ ಗಾಯವಾಗಿರುವುದಾಗಿ ತಿಳಿದು ಬಂದಿದೆ.

ಹೊಸಮಠ ಬಳಿ ಈ ಕಾರು ಆಟೋ ರಿಕ್ಷಾ ಕ್ಕೆ ಡಿಕ್ಕಿಯಾಗುವುದು ಕೂದಲೆಲೆಯ ಅಂತರದಲ್ಲಿ ತಪ್ಪಿದೆ ಎಂದು ಚಾಲಕರೊಬ್ಬರು ತಿಳಿಸಿದ್ದಾರೆ.ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!