Saturday, June 13, 2026
Homeಕರಾವಳಿಮಂಗಳೂರು: ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿ ನಾಪತ್ತೆ

ಮಂಗಳೂರು: ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿ ನಾಪತ್ತೆ

- Advertisement -
- Advertisement -

ಮಂಗಳೂರು: ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ನಿಮಗೆ ಏನೂ ತೊಂದರೆ ಮಾಡುವುದಿಲ್ಲ. ಎಲ್ಲಿಯಾದರೂ ಹೋಗಿ ದುಡಿದು ತಿನ್ನುತ್ತೇನೆ ಎಂದು ಹೇಳಿ ಹೊರಟವರು ನಾಪತ್ತೆಯಾದ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಪೆಡ್ರಿಕ್ ರೇಗೋ (69) ಬೆಳಿಗ್ಗೆ 10.30 ಕ್ಕೆ ಮನೆಗೆ ಬಂದವರು ಹೆಂಡತಿ ಜೊತೆ ‘ಇನ್ನು ನಿಮಗೆ ಏನೂ ತೊಂದರೆ ನೀಡುವುದಿಲ್ಲ, ಎಲ್ಲಿಯಾದರೂ ಹೋಗಿ ದುಡಿದು ತಿನ್ನುತ್ತೇನೆ ‘ಎಂದು ಹೇಳಿ 11.30 ಗಂಟೆಗೆ ಮನೆಯಿಂದ ಹೊರಟು ಹೋದವರು ಹಿಂತಿರುಗದೇ ಕಾಣೆಯಾಗಿದ್ದಾರೆ.


ಇವರು ಬಿಳಿ ಮೈಬಣ್ಣ ಹೊಂದಿದ್ದು, ಆಕಾಶ ನೀಲಿ ಬಣ್ಣದ ಚೌಕಳಿ ಇರುವ ಉದ್ದ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಫ್ಯಾಂಟನ್ನು ಧರಿಸಿದ್ದಾರೆ. ಇವರು ಇಂಗ್ಲೀಷ್, ಹಿಂದಿ, ಕನ್ನಡ, ಕೊಂಕಣಿ, ತಮಿಳು ಹಾಗೂ ತುಳು ಭಾಷೆ ಮಾತನಾಡುತ್ತಾರೆ.


ಈ ವ್ಯಕ್ತಿಯ ಬಗ್ಗೆ ಏನಾದರೂ ಮಾಹಿತಿ ತಿಳಿದುಬಂದಲ್ಲಿ ಮೂಲ್ಕಿ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ನಂಬರ್ ಸಂಖ್ಯೆ 0824-2290533 ಯನ್ನು ಸಂಪರ್ಕಿಸಿ.

- Advertisement -

Latest News

error: Content is protected !!