Saturday, June 6, 2026
Homeತಾಜಾ ಸುದ್ದಿಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ- ಸಂತ್ರಸ್ತ ಯುವತಿ ಸ್ಥಿತಿ ಚಿಂತಾಜನಕ

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ- ಸಂತ್ರಸ್ತ ಯುವತಿ ಸ್ಥಿತಿ ಚಿಂತಾಜನಕ

- Advertisement -
- Advertisement -

ಬೆಂಗಳೂರು: ಸುಂಕದಕಟ್ಟೆಯಲ್ಲಿ ನಡೆದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವೈದ್ಯರು, ಆ್ಯಸಿಡ್ ದಾಳಿಗೊಳಗಾದ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಯುವತಿಯ ದೇಹದ ಭಾಗ ಶೇ. 50 ಕ್ಕಿಂತಲೂ ಹೆಚ್ಚು ಸುಟ್ಟಿದೆ. ಯುವತಿ ಬೆನ್ನು, ಎದೆ, ತಲೆ ಹಿಂಭಾಗ ಸುಟ್ಟಿದ್ದು, ಸದ್ಯಕ್ಕೆ ಯುವತಿಯ ಸ್ಥಿತಿಯ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಯುವತಿ ಖಾಸಗಿ ಆಸ್ಪತ್ರೆಯಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಯುವತಿ ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿದ್ದಾರೆ ಎನ್ನಲಾಗಿದೆ.

ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಗೇಶ್ ಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!