- Advertisement -
![]()
- Advertisement -
ಅರಂತೋಡು: ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಇಂದು ಅರಂತೋಡು ಮತ್ತು ತೊಡಿಕಾನ ಗ್ರಾಮದ ಕೊರೋನಾ ವೈರಸ್ ತಡೆ ಟಾಸ್ಕ್ ಫೋರ್ಸ್ ಸಮಿತಿಯ ಜಂಟಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
- ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಮತ್ತು ಅಂಗಡಿಗಳನ್ನು ಬೆಳಗ್ಗೆ 7 ಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಮಾತ್ರ ತೆರೆಯುವುದು.
- ಅನುಮತಿ ಇಲ್ಲದ ಅಂತರ್ ಜಿಲ್ಲಾ ಸಂಚಾರವನ್ನು ನಿಷೇಧಿಸಿರುವುದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂತರ್ ಜಿಲ್ಲಾ ರಸ್ತೆಗಳನ್ನು ಮುಚ್ಚಿದ್ದು ಅದನ್ನು ಹಾಗೇ ಮುಂದುವರಿಸುವುದು .
- ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸಿ ತಮ್ಮ ವ್ಯವಹಾರಗಳನ್ನು ನಡೆಸುವುದು
- ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ ಯಾವುದೇ ರೀತಿಯ ಸೇವೆಯನ್ನು ನೀಡದಂತೆ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಸೂಚಿಸುವುದು.
- ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅಂತರ್ ಜಿಲ್ಲೆಯಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಹದಿನಾಲ್ಕು ದಿನಗಳ ಕ್ವಾರಂಟೈನ್ ಗೆ ಒಳಪಡಿಸುವುದು .
- ತಮ್ಮ ಮನೆಯಲ್ಲಿ ಅಂತರ್ ಜಿಲ್ಲೆಯಿಂದ ಬಂದವರಿಗೆ ಪ್ರತ್ಯೇಕವಾಗಿ ಇರುವುದಕ್ಕೆ ಮನೆಯವರು ವ್ಯವಸ್ಥೆ ಮಾಡುವುದು. ಇಲ್ಲದಿದ್ದಲ್ಲಿ ಸಂಪೂರ್ಣ ಮನೆಯನ್ನು ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡುವುದು.
- ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲೇರಿಯಾ ಮತ್ತು ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಸರ್ವ ಎಲ್ಲ ಮನೆಯವರು ಕೂಡ ತಮ್ಮ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ಸೂಚಿಸುವುದು.

ಈ ಸಂದರ್ಭದಲ್ಲಿ ಕೋರೋಣ ಕಾರ್ಯಪಡೆಯ ಸದಸ್ಯರಿಗೆ ರಾಜ್ಯ ಸರಕಾರದಿಂದ ಯೂಟ್ಯೂಬ್ ಮುಖಾಂತರ ತರಬೇತಿಯನ್ನು ಕೂಡ ನೀಡಲಾಯಿತು.
- Advertisement -


