Thursday, June 4, 2026
Homeತಾಜಾ ಸುದ್ದಿಸುಳ್ಯ: ಸ್ನಾನಕ್ಕೆಂದು ಹೋಗಿ ಕುಕ್ಕುಂಬಳ ಹೊಳೆಯಲ್ಲಿ ಮುಳುಗಿ ಬಾಲಕ ಸಾವು

ಸುಳ್ಯ: ಸ್ನಾನಕ್ಕೆಂದು ಹೋಗಿ ಕುಕ್ಕುಂಬಳ ಹೊಳೆಯಲ್ಲಿ ಮುಳುಗಿ ಬಾಲಕ ಸಾವು

- Advertisement -
- Advertisement -

ಸುಳ್ಯ: ಮಂಗಳೂರಿನ ಮನ್ವಿತ್(12 ವರ್ಷ) ಎಂಬಾತ ಅರಂತೋಡು ಗ್ರಾಮದ ಕುಕ್ಕುಂಬಳ ಹೊಳೆಯಲ್ಲಿ ಸ್ನಾನ ಮಾಡಲೆಂದು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಅರಂತೋಡಿನ ದಾಮೋದರ ಶೆಟ್ಟಿಯವರ ಪುತ್ರಿಯನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದಿದ್ದ. ಮನೆ ಸಮೀಪವಿರುವ ಕುಕ್ಕುಂಬಳ ಹೊಳೆಯಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದು ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.

- Advertisement -

Latest News

error: Content is protected !!