Thursday, June 4, 2026
HomeಕರಾವಳಿBIG BREAKING: ಕರಾವಳಿಯಲ್ಲಿ ಕೊರೋನಾ ಕುಣಿತ, ಇಂದು 2 ಮಂದಿಗೆ ಪಾಸಿಟಿವ್..!

BIG BREAKING: ಕರಾವಳಿಯಲ್ಲಿ ಕೊರೋನಾ ಕುಣಿತ, ಇಂದು 2 ಮಂದಿಗೆ ಪಾಸಿಟಿವ್..!

- Advertisement -
- Advertisement -

ಮಂಗಳೂರು: ಇಂದು ಕಳೆದ ಶನಿವಾರ ಬಂಟ್ವಾಳದ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದ್ದ ದ.ಕ ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ. ಆದರೆ ಇವರು ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಗಳಾಗಿದ್ದು ಫಸ್ಟ್ ‌ನ್ಯೂರೋ ಸಂಪರ್ಕದಿಂದ ಇಬ್ಬರಿಗೆ ಸೋಂಕು ದೃಢವಾಗಿದೆ.

ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಕಳ ಮೂಲದ ತಾಯಿ-ಮಗನಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಬ್ಬರ ಗಂಟಲು ದ್ರವದ ಪರೀಕ್ಷೆ ಪಾಸಿಟಿವ್ ಫಲಿತಾಂಶವನ್ನು ನೀಡಿದೆ. 50 ವರ್ಷ ಪ್ರಾಯದ ತಾಯಿ ಹಾಗೂ 26 ವರ್ಷ ಪ್ರಾಯದ ಮಗ ಕಳೆದ ಎ. 20ರಂದು ಚಿಕಿತ್ಸೆಗೆಂದು ಮಂಗಳೂರಿನ ಫಸ್ಟ್ ನ್ಯುರೋ ಆಸ್ಪತ್ರೆಗೆ ತೆರಳಿದ್ದರು. ಲಾಕ್‌ಡೌನ್ ಕಾರಣದಿಂದ ಆ ಬಳಿಕ ಅವರು ಕಾರ್ಕಳಕ್ಕೆ ಮರಳಿ ಬಂದಿಲ್ಲ. ಹೀಗಾಗಿ ಇಲ್ಲಿ ಅವರಿಗೆ ಯಾರೂ ಸಂಪರ್ಕಕ್ಕೆ ಬಂದ ಮಾಹಿತಿ ಇಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಹಾಸನದಲ್ಲಿ 5, ಧಾರವಾಡದಲ್ಲಿ 9, ಬೆಂಗಳೂರು 3, ಮಂಡ್ಯ 1 , ಬಾಗಲಕೋಟೆಯಲ್ಲಿ 15, ಬೀದರ್‌ 2, ಚಿಕ್ಕಬಳ್ಳಾಪುರದಲ್ಲಿ 1, ಯಾದಗಿರಿ 2, ದಕ್ಷಿಣ ಕನ್ನಡ 2, ಬಳ್ಳಾರಿ 1, ಕಲಬುರಗಿ 1 ಹಾಗೂ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!