- Advertisement -
- Advertisement -
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಎಂಬಲ್ಲಿ ಮೊನ್ನೆ ರಾತ್ರಿ ಮನೆಯ ಹಟ್ಟಿಯಲ್ಲಿದ್ದ ದನ ಮತ್ತು ಕೋಳಿಗಳು ನಾಪತ್ತೆಯಾಗಿದ್ದವು. ಮನೆ ಮಂದಿ ಇದು ಗೋಕಳ್ಳರ ಕೆಲಸ ಎಂದು ಆರೋಪಿಸಿದ್ದರು.
ಇಲ್ಲಿನ ಮೋಹಿನಿ ಎಂಬುವರ ಮನೆಯ ಹಟ್ಟಿಯಲ್ಲಿ ದನ ಜೊತೆಗೆ ಕೋಳಿಗಳು ಹಾಗೂ ನಾಯಿಮರಿಗಳು ಕೂಡ ನಾಪತ್ತೆಯಾಗಿದ್ದವು. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.ಆದರೆ ಇಂದು ಬೆಳಗ್ಗೆ ಮೋಹಿನಿ ಅವರ ಮನೆಯ ಬಳಿ ದನ ಪ್ರತ್ಯಕ್ಷವಾಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ದನವನ್ನು ಕದ್ದುಕೊಂಡು ಹೋದವರು ವಾಪಸ್ ಕರೆ ತಂದು ಬಿಟ್ರಾ ಇಲ್ಲ ದನ ಕಾಡಿಗೆ ಮೇಯಲು ಹೋಗಿತ್ತಾ ಹೀಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
- Advertisement -