Friday, June 5, 2026
Homeತಾಜಾ ಸುದ್ದಿತಂಬಾಕು ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಟ್ರೋಲ್ ಆದ ಅಕ್ಷಯ್ ಕುಮಾರ್; ಅಭಿಮಾನಿಗಳಲ್ಲಿ ಕ್ಷಮೆಯಾಚನೆ

ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಟ್ರೋಲ್ ಆದ ಅಕ್ಷಯ್ ಕುಮಾರ್; ಅಭಿಮಾನಿಗಳಲ್ಲಿ ಕ್ಷಮೆಯಾಚನೆ

- Advertisement -
- Advertisement -

ವಿಮಲ್ ಇಲೈಚಿ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಜನರು ಟ್ರೋಲ್ ಮಾಡಿದ ನಂತರ ನಟ ಅಕ್ಷಯ್ ಕುಮಾರ್ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಅಕ್ಷಯ ಕುಮಾರ್, ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಗುಟ್ಕಾ ಜಾಹಿರಾತಿನಲ್ಲಿ ಕಾಣಿಸಿಕೊಡಿದ್ದಕ್ಕೆ ಖಂಡನೆ ವ್ಯಕ್ತಪಡಿಸಿ ಟ್ರೋಲ್ ಮಾಡಿದ್ದ ಜನ, “ಮೂವರು ಪದ್ಮಶ್ರೀಗಳು ಗುಟ್ಕಾ ಪ್ರಚಾರ ಮಾಡುತ್ತಿದ್ದಾರೆ.

ಇಂತವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಕೊಟ್ಟು ಅದರ ಗೌರವ ಕಳೆಯಬಾರದು’ ಎಂದು ಹೇಳಿದ್ದರು. ಹಾಗಾಗಿ, ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿರುವ ಅಕ್ಷಯ್ ಕುಮಾರ್, ಮುಂದಿನ ದಿನಗಳಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳದಿರುವ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ. ಕ್ಷಮೆ ಕೋರಿ ಸುದೀರ್ಘ ಪತ್ರವೊಂದನ್ನು ಅವರು ಪೋಸ್ಟ್ ಮಾಡಿದ್ದಾರೆ.

- Advertisement -

Latest News

error: Content is protected !!