Wednesday, June 3, 2026
Homeಕರಾವಳಿರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ವ್ಯಕ್ತಿ ಸಾವು- 6 ತಿಂಗಳ ಪುತ್ರನನ್ನು ಕೊಂದು...

ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ವ್ಯಕ್ತಿ ಸಾವು- 6 ತಿಂಗಳ ಪುತ್ರನನ್ನು ಕೊಂದು ಪತ್ನಿ ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ವ್ಯಕ್ತಿಯೋರ್ವರು ಕುಂಟಿಕಾನ ಬಳಿ ರಸ್ತೆ ದಾಟುತ್ತಿದ್ದಾ‌ಗ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತರು ಅಗ್ನಿಶಾಮಕ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾವಿನ ಸುದ್ದಿ ತಿಳಿದು ಮೃತರ ಪತ್ನಿಯೂ ತಮ್ಮ6 ತಿಂಗಳ ಪುತ್ರನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಗಂಗಾಧರ ಬಿ. ಕಮ್ಮಾರ (36 ವರ್ಷ) ಅಪಘಾತದಲ್ಲಿ ಮೃತಪಟ್ಟವರು. ಶನಿವಾರ ರಾತ್ರಿ 8.50 ಸುಮಾರಿಗೆ ಎನ್‌ಎಚ್-66 ರಲ್ಲಿ ಕುಂಟಿಕಾನ ಬಳಿ ರಸ್ತೆ ದಾಟುವಾಗ ಕುಂದಾಪುರಕ್ಕೆ ಹೋಗುತ್ತಿದ್ದ ಕಾರು ( XUV 500 ) ಡಿಕ್ಕಿ ಹೊಡೆದ ಪರಿಣಾಮ ಗಂಗಾಧರ ರವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇತ್ತ ತನ್ನ ಪತಿ ಅಪಘಾತದಲ್ಲಿ ಮೃತಪಟ್ಟಿರುವ ವಿಷಯ ತಿಳಿದ ಪತ್ನಿ ಶೃತಿ (30) ಅವರು ರಾತ್ರಿ 10 ಗಂಟೆಗೆ 6 ತಿಂಗಳ ಪುತ್ರ ಅಭಿರಾಮನನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಶ್ರುತಿ ಅವರು ತಮ್ಮ ತಮ್ಮನ ಮನೆಯಲ್ಲಿದ್ದರು.

- Advertisement -

Latest News

error: Content is protected !!