Friday, June 5, 2026
Homeತಾಜಾ ಸುದ್ದಿಕಾಲೇಜಿನಲ್ಲಿ ಅಸಭ್ಯವಾಗಿ ವರ್ತಿಸಿದ ಉಪನ್ಯಾಸಕ: ಲೆಕ್ಚರರ್ ಗೆ ಚೆನ್ನಾಗಿ ಬೋಧಿಸಿದ ಉಪನ್ಯಾಸಕಿಯರು

ಕಾಲೇಜಿನಲ್ಲಿ ಅಸಭ್ಯವಾಗಿ ವರ್ತಿಸಿದ ಉಪನ್ಯಾಸಕ: ಲೆಕ್ಚರರ್ ಗೆ ಚೆನ್ನಾಗಿ ಬೋಧಿಸಿದ ಉಪನ್ಯಾಸಕಿಯರು

- Advertisement -
- Advertisement -

ಬೆಳಗಾವಿ:ಉಪನ್ಯಾಸಕಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಉಪನ್ಯಾಸಕನಿಗೆ ಉಪನ್ಯಾಸಕಿಯರು ಚೆನ್ನಾಗಿ ಥಳಿಸಿರುವ ಘಟನೆ ಬೆಳಗಾವಿ ಸರ್ದಾರ ಪಿಯು ಕಾಲೇಜಿನಲ್ಲಿ ನಡೆದಿದೆ.

ಕಾಲೇಜಿನ ಆವರಣದಲ್ಲಿಯೇ ಮಹಿಳಾ ಸಿಬ್ಬಂದಿ ಪಿಯು ಕಾಲೇಜಿನ ಇಂಗ್ಲೀಷ್ ವಿಭಾಗದ ಖಾಯಂ ಉಪನ್ಯಾಸಕ ಅಮಿತ್ ಬಸವಮೂರ್ತಿ ಗೆ ಥಳಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ಉಪನ್ಯಾಸಕ ಪ್ರತಿ ನಿತ್ಯ ಕಾಲೇಜಿಗೆ ಮದ್ಯ ಸೇವನೆ ಮಾಡಿಕೊಂಡು ಬಂದು ಮಹಿಳಾ ಉಪನ್ಯಾಸಕಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ದೈಹಿಕವಾಗಿ ದೌರ್ಜನ್ಯ ಎಸಗುತ್ತಿದ್ದ. ಇದರ ಜೊತೆಗೆ ಮಹಿಳಾ ಸಿಬ್ಬಂದಿ ಇರುವ ವಿಶ್ರಾಂತಿ ಕೊಠಡಿಗೆ ತೆರಳಿ ಕೆಟ್ಟದಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.ಇದೀಗ ಉಪನ್ಯಾಸಕನ ವಿರುದ್ಧ ಪೊಲೀಸ್ ದೂರು‌ ಕೂಡ ದಾಖಲಾಗಿದೆ.

- Advertisement -

Latest News

error: Content is protected !!