Sunday, May 5, 2024
Homeತಾಜಾ ಸುದ್ದಿಮಂಗಳೂರು: ಬುರ್ಖಾದ ಬಟನ್ ಒಳಗಡೆ ಚಿನ್ನ ಬಚ್ಚಿಟ್ಟು ಅಕ್ರಮ ಸಾಗಾಟ: 5.34 ಲಕ್ಷ ರೂ. ಮೌಲ್ಯದ...

ಮಂಗಳೂರು: ಬುರ್ಖಾದ ಬಟನ್ ಒಳಗಡೆ ಚಿನ್ನ ಬಚ್ಚಿಟ್ಟು ಅಕ್ರಮ ಸಾಗಾಟ: 5.34 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡ ಕಸ್ಟಮ್ಸ್‌ ಅಧಿಕಾರಿಗಳು

spot_img
- Advertisement -
- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುರ್ಖಾದ ಬಟನ್​ನೊಳಗೆ ಚಿನ್ನ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದದ್ದು ಪತ್ತೆಯಾಗಿದೆ. 5.34 ಲಕ್ಷ ರೂ. ಮೌಲ್ಯದ ಚಿನ್ನವನ್ನು  ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಓರ್ವ ಪ್ರಯಾಣಿಕನನ್ನು ಬಂಧಿಸಿದ್ದಾರೆ.

ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಆಗ ಆತ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಪ್ರಯಾಣಿಕನ ಬಳಿಯಿದ್ದ ಬುರ್ಕಾವನ್ನು ತಪಾಸಣೆ ನಡೆಸಿದಾಗ, ಅದರ ಬಟನ್​​ನೊಳಗಡೆ ಉಂಗುರದಾಕಾರದಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ.

ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನಿಂದ 5,34,000 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕನನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!