- Advertisement -
![]()
- Advertisement -
ಬಜಪೆ: ಬಜಪೆ, ಪೆರ್ಮುದೆ, ಎಕ್ಕಾರು ಹಾಗೂ ಕಟೀಲು ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಕೆಲ ಕಡೆಗಳಲ್ಲಿ ಮರಗಳು ಉರುಳಿಬಿದ್ದು, ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು.
ಭಾರೀ ಗಾಳಿಗೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಚ್ಚಾಳ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ರಸ್ತೆಯಂಚಿಗೆ ಬಿದ್ದಿದೆ. ಪರಿಣಾಮ, ರಸ್ತೆಯ ಅಂಚಿನ ವಿದ್ಯುತ್ ಕಂಬಗಳಲ್ಲಿ ಹಾದು ಹೋದ ತಂತಿಗಳಿಗೆ ಹಾನಿ ಸಂಭವಿಸಿದೆ. ತಂತಿಯ ಮೇಲೆಯೇ ಮರದ ಕೊಂಬೆಗಳು ಬಿದ್ದ ಪರಿಣಾಮವಾಗಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿ ದುರಸ್ತಿ ಮಾಡಿದ್ದಾರೆ.
- Advertisement -


