Saturday, October 17, 2026
Homeತಾಜಾ ಸುದ್ದಿವೈವಾಹಿಕ ಬದುಕಿಗೆ ಕಾಲಿಟ್ಟ ರಣ್‌ಬೀರ್ ಕಪೂರ್ - ಆಲಿಯಾ ಭಟ್ ಜೋಡಿ: ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದ...

ವೈವಾಹಿಕ ಬದುಕಿಗೆ ಕಾಲಿಟ್ಟ ರಣ್‌ಬೀರ್ ಕಪೂರ್ – ಆಲಿಯಾ ಭಟ್ ಜೋಡಿ: ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದ ವಿವಾಹ

- Advertisement -
- Advertisement -

ಬಾಲಿವುಡ್‌ನ ಸ್ಟಾರ್ ನಟ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದಾರೆ. ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರ ಪ್ರೇಮಕ್ಕೆ ಇಂದು ಅಧಿಕೃತ ಮುದ್ರೆ ಬಿದ್ದಿದೆ. ಇಂದು ‘ರಲಿಯಾ’ ಜೋಡಿ ಅಧಿಕೃತವಾಗಿ ‘ಮಿಸ್ಟರ್ ಅಂಡ್ ಮಿಸಸ್ ಕಪೂರ್’ ಆಗಿದ್ದಾರೆ.

ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ಕುಟುಂಬದ ‘ವಾಸ್ತು’ ನಿವಾಸದಲ್ಲಿ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರ ವಿವಾಹ ಮಹೋತ್ಸವ ನಡೆದಿದೆ. ಇಂದು (ಏಪ್ರಿಲ್ 14 – ಗುರುವಾರ) ಮಧ್ಯಾಹ್ನದ ನಂತರ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರ ಮದುವೆ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದೆ. ಪಂಜಾಬಿ ಸಂಪ್ರದಾಯದಂತೆ  ವಿವಾಹ ಜರುಗಿದೆ.

ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿರುವ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸದ್ಯದಲ್ಲೇ ಆತ್ಮೀಯರಿಗೆ ಹಾಗೂ ಬಾಲಿವುಡ್ ಸ್ನೇಹಿತರಿಗಾಗಿ ಗ್ರ್ಯಾಂಡ್ ರಿಸೆಪ್ಷನ್ ಆಯೋಜಿಸಲಿದ್ದಾರಂತೆ. ಮುಂಬೈನ 5 ಸ್ಟಾರ್ ಹೋಟೆಲ್‌ನಲ್ಲಿ ರಿಸೆಪ್ಷನ್ ನಡೆಯಲಿದ್ದು, ಆರತಕ್ಷತೆಗೆ ಬಾಲಿವುಡ್ ತಾರೆಯರಿಗೆ ಆಹ್ವಾನ ನೀಡಲಾಗಿದೆ.

- Advertisement -

Latest News

error: Content is protected !!