- Advertisement -
- Advertisement -
ನವದೆಹಲಿ : ಛತ್ತೀಸ್ಗಡದ ರಾಜನಂದಗಾಂವ್ ಜಿಲ್ಲೆಯಲ್ಲಿ ಶುಕ್ರವಾರ ತಡ ರಾತ್ರಿ ನಕ್ಸಲರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನಚಕಮಕಿಯಲ್ಲಿ ಓರ್ವ ಪೊಲೀಸ್ ಉಪನಿರೀಕ್ಷಕ ಮೃತಪಟ್ಟಿದ್ದಾರೆ. ಹಾಗೇ ನಾಲ್ವರು ಮಾವೋವಾದಿಗಳನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ.
ಮನ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪರೋಧೋನಿ ಗ್ರಾಮದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ಮಧ್ಯೆ ದಾಳಿ-ಪ್ರತಿದಾಳಿ ನಡೆದಿತ್ತು.
ದೇಶದ ಕಶ್ಮೀರ ಗಡಿಯಲ್ಲಿ ಉಗ್ರರ ಹಾವಳಿಯಾದರೆ ಇನ್ನೊಂದೆಡೆ ದೇಶದ ಒಳಗೆ ನಕ್ಸಲರ ದಾಳಿ ಪ್ರಾರಂಭವಾಗಿದೆ. ಲಾಕ್ಡೌನ್ ನಡುವೆಯೂ ನಕ್ಸಲರು, ಉಗ್ರರ ಉಪಟಳ ಮಿತಿಮೀರುತ್ತಿದೆ.
ಗುಂಡಿನ ದಾಳಿಯಲ್ಲಿ ಸತ್ತ ನಾಲ್ವರು ನಕ್ಸಲರ ಮೃತದೇಹಗಳನ್ನು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2009ರ ಜುಲೈ 12ರಂದು ಇದೇ ಸ್ಥಳದಲ್ಲಿ ಮಾವೋವಾದಿಗಳ ದಾಳಿಗೆ 29 ಪೊಲೀಸರು ಸಾವನ್ನಪ್ಪಿದ್ದರು
- Advertisement -