Sunday, June 7, 2026
Homeಕರಾವಳಿಬೆಳ್ತಂಗಡಿಯ ನಡದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು

ಬೆಳ್ತಂಗಡಿಯ ನಡದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು

- Advertisement -
- Advertisement -

ಬೆಳ್ತಂಗಡಿ: ಹಾಡಹಗಲೇ ಮನೆಗೆ ನುಗ್ಗಿ‌ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ಎಂಬಲ್ಲಿ‌ ನಡೆದಿದೆ.


ಇಲ್ಲಿನ ತಿಮ್ಮಪ್ಪ ಪೂಜಾರಿ‌ ಹಾಗೂ ಅವರ‌‌ ಮಕ್ಕಳು
08-04-2022 ರಂದು ಕೆಲಸಕ್ಕೆ ಹೋದ ಬಳಿಕ ಅವರ   ಪತ್ನಿ ಬೆಳಿಗ್ಗೆ 10-30ರ‌ ವೇಳೆಗೆ ಬೆಳ್ತಂಗಡಿಗೆ ತೆರಳಿದ್ದಾರೆ.ಮಧ್ಯಾಹ್ನ _1-30 ರ ವೇಳೆಗೆ ಮನೆಗೆ ಬಂದು   ಎದುರಿನ ಬೀಗ ತೆಗೆಯಲು ನೋಡಿದಾಗ ತೆಗೆಯಲು‌ ಸಾಧ್ಯವಾಗಿಲ್ಲ. ಕೂಡಲೇ ಪಕ್ಕದವರ ಮನೆಯವರ ಸಹಾಯದಿಂದ ಮನೆ ಒಳಗೆ ಹೋಗಿ ನೋಡಿದಾಗ ಹಂಚು‌ ತೆಗೆದು ಕಳ್ಳರು‌ ಒಳ ನುಗ್ಗಿರುವುದು  ಗೊತ್ತಾಗಿದೆ.

ಬಳಿಕ ಕೋಣೆಯಲ್ಲಿದ್ದ ಗಾಡ್ರೇಜ್ ನ್ನು ಪರಿಶೀಲಿಸಿದಾಗ ಅದರಲ್ಲಿದ್ದ  ಸುಮಾರು ಒಟ್ಟು 17.240 ಗ್ರಾಂ ತೂಕದ ಚಿನ್ನಾಭರಣವನ್ನು ಕಳ್ಳರು ಕದ್ದಿರುವುದು ಗೊತ್ತಾಗಿದೆ.   ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ  55,000/- ಎಂದು‌ ಅಂದಾಜಿಸಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ‌ಪೊಲೀಸರಿಗೆ ಮನೆಯವರು ದೂರು ನೀಡಿದ್ದು ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!