Thursday, June 4, 2026
Homeಕರಾವಳಿಉಡುಪಿಪೋಕ್ಸ್ ಪ್ರಕಣದಲ್ಲಿ ಜೈಲು ವಾಸಿಯಾಗಿದ್ದ ಯುವಕ ಕಾರಾಗೃಹದಲ್ಲಿ ಆತ್ಮಹತ್ಯೆ

ಪೋಕ್ಸ್ ಪ್ರಕಣದಲ್ಲಿ ಜೈಲು ವಾಸಿಯಾಗಿದ್ದ ಯುವಕ ಕಾರಾಗೃಹದಲ್ಲಿ ಆತ್ಮಹತ್ಯೆ

- Advertisement -
- Advertisement -

ಗದಗ: ಇಲ್ಲಿನ ಅಡವಿ ಸೋಮಾಪುರ ಗ್ರಾಮದ ಪೋಸ್ಕೊ ಪ್ರಕಣದಲ್ಲಿ ಜೈಲು ಸೇರಿದ್ದ ಯುವಕ ಜಿಲ್ಲಾ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ರಾಜು ಲಮಾಣಿ (19) ಎಂದು ಗುರುತಿಸಲಾಗಿದೆ.
ದ್ವಿತೀಯ ಪಿಯುಸಿ ಓದುತ್ತಿದ್ದ ರಾಜು ಲಮಾಣಿ, ಅದೇ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದು, ಇಬ್ಬರೂ ಗೋವಾಕ್ಕೆ ಓಡಿ ಹೋಗಿದ್ದರು. ಬಳಿಕ ಹುಡುಗಿಯ ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಪ್ರಕರಣ ದಾಖಲಿಸಿದ್ದರು.


ಇನ್ನು 20 ದಿನಗಳಿಂದ ಜೈಲಿನಲ್ಲಿ ಇದ್ದ ಯುವಕನಿಗೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಹೊರಬರುವವನಿದ್ದ. ಆದರೆ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಯುವಕನ ಸಾವಿಗೆ ಜೈಲು ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ.

- Advertisement -

Latest News

error: Content is protected !!