Monday, May 20, 2024
Homeಕರಾವಳಿಉಡುಪಿಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮೇಲೆ ಹಲ್ಲೆಗೆ ಯತ್ನ ಆರೋಪ: ಶಿರ್ವ ಪಿಡಿಓ ಅಮಾನತಿಗೆ...

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮೇಲೆ ಹಲ್ಲೆಗೆ ಯತ್ನ ಆರೋಪ: ಶಿರ್ವ ಪಿಡಿಓ ಅಮಾನತಿಗೆ ರಮೀಝ್ ಹುಸೈನ್ ಒತ್ತಾಯ

spot_img
- Advertisement -
- Advertisement -

ಉಡುಪಿ: ಪರಿಶಿಷ್ಟ ಜಾತಿಯ ಮಹಿಳೆಯೋರ್ವಳಿಗೆ ಸಂಬಂಧಿಸಿದ ಮನೆಯೊಂದನ್ನು ತೆರವುಗೊಳಿಸಿದ್ದರ ವಿರುದ್ಧ ಮನವಿ ಸಲ್ಲಿಸಲು ತೆರಳಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ಜೊತೆ ಶಿರ್ವ ಗ್ರಾಮ ಪಂಚಾಯತ್ ಪಿಡಿಒ ತೋರಿದ ಅಮಾನವೀಯ ವರ್ತನೆ ಹಾಗೂ ಹಲ್ಲೆಗೆ ಯತ್ನಿಸಿರುವ ಘಟನೆಯನ್ನು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಖಂಡಿಸಿದೆ.

ಘಟನೆ ಕಾರಣವಾದ ಶಿರ್ವ ಪಿಡಿಒ ಅನಂತ ಪದ್ಮನಾಭ ನಾಯಕ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಬ್ಲಾಕ್ ಕಾಂಗ್ರೆಸ್ ಯುವ ಘಟಕಾಧ್ಯಕ್ಷ ರಮೀಝ್ ಹುಸೈನ್ ಒತ್ತಾಯಿಸಿದ್ದಾರೆ. “ಈ ಮಧ್ಯೆ ಈ ವಿಚಾರದಲ್ಲಿ ಸೊರಕೆಯವರು ಮಾಧ್ಯಮ ಹೇಳಿಕೆ ನೀಡುತ್ತಿದ್ದ ಸಂದರ್ಭ ಏಕಾಏಕಿ ಬಿಜೆಪಿ ಗೂಂಡಾಗಳು ಘೋಷಣೆ ಕೂಗುತ್ತಾ, ಸೊರಕೆಯವರ ಮಾತಿಗೆ ಅಡ್ಡಿಪಡಿಸಿದ್ದು, ಬಡಕುಟುಂಬದ ಮನೆಯನ್ನು ದ್ವಂಸಗೊಳಿಸುವಲ್ಲಿ ಬಿಜೆಪಿಯ ಕೈವಾಡ ಸ್ಪಷ್ಟವಾಗಿ ಗೋಚರವಾಗುತ್ತದೆ” ಎಂದು ರಮೀಝ್ ಹುಸೈನ್ ತಿಳಿಸಿದ್ದಾರೆ.

“ಬಿಜೆಪಿಯು ಶಿರ್ವ ಪಿಡಿಓ ಜೊತೆ ಸೇರಿ ಯಾವುದೇ ನೋಟಿಸ್ ನೀಡದೆ ಮನೆಯನ್ನು ದ್ವಂಸಗೊಳಿಸಿದ್ದು ಅತ್ಯಂತ ಖಂಡನೀಯ. ಇದೀಗ ಆ ಕುಟುಂಬವು ಮನೆ ಇಲ್ಲದೆ ಬೀದಿಪಾಲಾಗಿದೆ. ಬಿಜೆಪಿಯವರಿಗೆ ನೈತಿಕತೆ ಇದ್ದರೆ ನೊಂದ ಮಹಿಳೆಯ ಕುಟುಂಬದ ಜೊತೆ ಇದ್ದು ಮನೆ ನಿರ್ಮಾಣ ಕಾರ್ಯದಲ್ಲಿ ನೈತಿಕ ಬೆಂಬಲ ಸೂಚಿಸಬೇಕು. ಕೂಡಲೇ ಆ ಬಡಕುಟುಂಬಕ್ಕೆ ಮನೆಯನ್ನು ಪಂಚಾಯತಿ ವತಿಯಿಂದಲೇ ನಿರ್ಮಾಣ ಮಾಡಿಕೊಡಬೇಕು” ಎಂದು ರಮೀಝ್ ಹುಸೈನ್ ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!