Friday, June 5, 2026
Homeತಾಜಾ ಸುದ್ದಿನಮ್ಮ ಸರ್ಕಾರ ಯಾವುದೇ ಹೊಸ ಅದೇಶಗಳನ್ನ ಹೊರಡಿಸಿಲ್ಲ, ಎಲ್ಲಾ ಹಳೆ ಅದೇಶಗಳೇ : ಸಿಎಂ ಬೊಮ್ಮಾಯಿ‌

ನಮ್ಮ ಸರ್ಕಾರ ಯಾವುದೇ ಹೊಸ ಅದೇಶಗಳನ್ನ ಹೊರಡಿಸಿಲ್ಲ, ಎಲ್ಲಾ ಹಳೆ ಅದೇಶಗಳೇ : ಸಿಎಂ ಬೊಮ್ಮಾಯಿ‌

- Advertisement -
- Advertisement -

ಬೆಂಗಳೂರು: ಹಿಜಾಬ್ ಆಯ್ತು , ಹಲಾಲ್ ಆಯ್ತು ಈಗ ಆಝಾನ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ..ಇದ್ರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ‌ ನಮ್ಮ ಸರ್ಕಾರ ಯಾವುದೇ ಹೊಸ ಅದೇಶಗಳನ್ನ ಹೊರಡಿಸಿಲ್ಲ, ಎಲ್ಲಾ ಹಳೆ ಅದೇಶಗಳೇ ಎಂದಿದ್ದಾರೆ. ಇವೆಲ್ಲಾ ಹಿಂದಿನಿಂದ ಬಂದಿರುವ ವಿಚಾರಗಳು. ಈಗ ಹೊಸದಾಗಿ ಬಂದಿಲ್ಲ, ಎಲ್ಲಾ ಹಳೆಯ ಆದೇಶಗಳೇ ಆಗಿವೆ. ಹೈಕೋರ್ಟಿನ ತೀರ್ಪುಗಳು ಕೂಡ ಹಳೆಯವು. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ. ನಾವು ಎಲ್ಲವುಗಳನ್ನು ಗಮನದಲ್ಲಿರಿಸಿಕೊಂಡು ಯಾವುದೇ ಸಮಾಜ ಆಗಲಿ ಯಾವುದೇ ಸಂಘಟನೆ ಆಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ… ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ… ಯಾವುದೇ ಭೇದಭಾವವಿಲ್ಲದೆ ನಾವು ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಸ್ಪಷ್ಟಪಡಿಸಿದ್ದಾರೆ…

ಆಝಾನ್ ಕುರಿತು ಈಗಾಗಲೇ ಹೈಕೋರ್ಟ್ ಆದೇಶವಿದೆ. ಯಾಕೆ ಕೋರ್ಟ್ ತೀರ್ಪು ಅನುಷ್ಠಾನಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದೆ…ಆಝಾನ್ ಗೆ ಡೆಸಿಬಲ್ ಪ್ರಮಾಣ ನಿಗದಿಗೊಳಿಸಿದೆ. ಡೆಸಿಬಲ್ ತಪಾಸಣೆ ಮಾಡುವ ಯಂತ್ರ ಖರೀದಿ ಮಾಡುವ ಹಾಗು ಹೈಕೋರ್ಟ್ ಆದೇಶಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ…ಇದು‌ ಒತ್ತಾಯದಿಂದ ಮಾಡುವ ಕೆಲಸವಲ್ಲ..ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮಾಡಬೇಕಿರುವ ಕೆಲಸ ಇದು..ಹಲವಾರು ಸಂಘಟನೆಗಳನ್ನು ಪೊಲೀಸ್ ಠಾಣೆಯಿಂದ  ಹಿಡಿದು ಜಿಲ್ಲಾ ಮಟ್ಟದವರೆಗೆ ಈಗಾಗಲೇ ಸಭೆಗಳನ್ನು ಮಾಡಿದ್ದೇವೆ ಮುಂದೆಯೂ ಸಭೆಗಳನ್ನು ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು…

- Advertisement -

Latest News

error: Content is protected !!