Friday, June 5, 2026
Homeಕರಾವಳಿಕಾಸರಗೋಡುಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ನದಿಯಲ್ಲಿ ಮುಳುಗಿ ಮದುಮಗ ಸಾವು

ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ನದಿಯಲ್ಲಿ ಮುಳುಗಿ ಮದುಮಗ ಸಾವು

- Advertisement -
- Advertisement -

ಕೇರಳ: ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ನದಿಯಲ್ಲಿ ಮುಳುಗಿ ಮದುಮಗ ಮೃತಪಟ್ಟಿದ್ದು, ಮದುಮಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೇರಳದ ಕೋಯಿಕ್ಕೋಡ್ ಸಮೀಪದ ಕುಟ್ಟಿಯಾಡಿಯಲ್ಲಿ ನಡೆದಿದೆ.


ಕಡಿಯಂಗಡ ಮೂಲದ ರೆಜಿಲ್ ಮೃತ ವರ ಎಂದು ಗುರುತಿಸಲಾಗಿದೆ. ಈತನ ಪತ್ನಿ ಕಾರ್ತಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್ 14ರಂದು ರೆಜಿಲ್ ಮತ್ತು ಕಾರ್ತಿಕಾ ಮದುವೆಯಾಗಿತ್ತು. ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್‌ಗಾಗಿ ಕುಟ್ಟಿಯಾಡಿ ನದಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನದಿಗೆ ಬಿದ್ದಿದ್ದಾರೆ.


ನದಿಗೆ ಬಿದ್ದ ಬಳಿಕ ಇಬ್ಬರ ಚೀರಾಟದ ಧ್ವನಿ ಕೇಳಿದ ಸ್ಥಳೀಯರು ದೌಡಾಯಿಸಿ ನದಿಗೆ ಹಾರಿ ಇಬ್ಬರನ್ನೂ ಹೊರತೆಗೆದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲೇ, ರೆಜಿಲ್ ಕೊನೆಯುಸಿರೆಳೆದಿದ್ದಾನೆ.

- Advertisement -

Latest News

error: Content is protected !!