Saturday, June 28, 2025
Homeತಾಜಾ ಸುದ್ದಿಶಾಕಿಂಗ್: ಮುಂಬೈನ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲೇ ಕೊರೋನಾ ರೋಗಿಗಳಿಗೆ ಚಿಕಿತ್ಸೆ

ಶಾಕಿಂಗ್: ಮುಂಬೈನ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲೇ ಕೊರೋನಾ ರೋಗಿಗಳಿಗೆ ಚಿಕಿತ್ಸೆ

spot_img
- Advertisement -
- Advertisement -

ಮುಂಬೈ: ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಇದರಿಂದ ಸಾವು ನೋವು ಹೆಚ್ಚುತ್ತಿದೆ. ಇದರ ಜೊತೆಗೆ ಮುಂಬೈ ಒಂದು ಕಡೆಯಲ್ಲೆ ದೇಶದ ಅತ್ಯಂತ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇದರ ನಡುವೆ ಶಾಕಿಂಗ್ ಸುದ್ದಿಯೊಂದು ವರದಿಯಾಗಿದೆ.

ಹೌದು ಮುಂಬೈನ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವವರ ಶವಗಳ ಪಕ್ಕದಲ್ಲೆ ಕೋರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ, ಆಸ್ಪತ್ರೆಯ ಈ ನಡೆಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಬೈ ಮಹಾನಗರ ಪಾಲಿಕೆ ಅಧೀನದಲ್ಲಿರುವ ಸಿಯೋನ್ ಆಸ್ಪತ್ರೆಯಲ್ಲಿ, ಕೊರೊನಾದಿಂದ ಮೃತಪಟ್ಟವರ ಶವಗಳ ನಡುವೆಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಾರ್ಡ್‌ನಲ್ಲಿ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಕನಿಷ್ಠ ಏಳು ಶವಗಳನ್ನು ಇಟ್ಟಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಸಿಯೋನ್ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಮೋದ್ ಇಂಗ್ಳೆ, ಕೊರೊನಾ ವೈರಸ್‌ನಿಂದ ಮೃತಪಟ್ಟವರ ಶವಗಳನ್ನು ಕೊಂಡೊಯ್ಯಲು ಕುಟುಂಬಸ್ಥರು ನಿರಾಕರಿಸುತ್ತಿರುವುದರಿಂದ ಬೇರೆ ವಿಧಿಯಿಲ್ಲದೇ ಶವಗಳನ್ನು ಹಾಗೆಯೇ ಬಿಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಶವಾಗಾರದಲ್ಲಿ ಕೇವಲ 15 ಶವಗಳನ್ನು ಇಡಲು ಜಾಗವಿದ್ದು, ಈಗಾಗಲೇ 11 ಶವಗಳನ್ನು ಇಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -
spot_img

Latest News

error: Content is protected !!