Thursday, June 4, 2026
Homeಕರಾವಳಿವಿಟ್ಲದಲ್ಲಿ ಕೋಳಿಮರಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ವಿಟ್ಲದಲ್ಲಿ ಕೋಳಿಮರಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ವಿಟ್ಲ: ಕೋಳಿಮರಿಯನ್ನು ರಕ್ಷಿಸಲು ಹೋಗಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ವಿಟ್ಲದ ಕರೋಪಾಡಿ ಗ್ರಾಮದ ಮದರಮೂಲೆಯಲ್ಲಿ ನಡೆದಿದೆ.

ಕರೋಪಾಡಿ ಗ್ರಾಮದ ಮದರಮೂಲೆ ನಿವಾಸಿ ವಸಂತ ಮುಗೇರ (37) ಮೃತ ದುರ್ದೈವಿ. ನಿನ್ನೆ ಸಂಜೆ 4 ಗಂಟೆ ವೇಳೆಗೆ ಸವಂತ ಮುಗೇರ ಅವರು ತಮ್ಮ ಮನೆಯ ಮುಂದಿನ 70 ಅಡಿ ಆಳದ ಬಾವಿಗೆ ಬಿದ್ದಿದ್ದ ಕೋಳಿ ಮರಿಯ ರಕ್ಷಣೆಗೆ ಮುಂದಾಗಿದ್ದಾರೆ.ಈ ವೇಳೆ ಬಾವಿಯ ಕಟ್ಟೆ ಕುಸಿದು 70 ಅಡಿ ಆಳದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!