Friday, June 5, 2026
Homeತಾಜಾ ಸುದ್ದಿಅಣ್ಣಾಮಲೈ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ?

ಅಣ್ಣಾಮಲೈ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ?

- Advertisement -
- Advertisement -

ಕರ್ನಾಟಕದ ಸಿಂಗಂ ಎಂದೇ ಹೆಸರುವಾಸಿಯಾಗಿರುವ, ಸದ್ಯ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಕೆ. ಅಣ್ಣಾಮಲೈ ಇದೀಗ ಬರೋಬ್ಬರಿ 100 ಕೋಟಿ ರೂ. ಮಾನನಷ್ಟೆ ಮೊಕದ್ದಮೆ ಭೀತಿಯಲ್ಲಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ಸದ್ಯ ಯುಎಇ ಪ್ರವಾಸದಲ್ಲಿದ್ದು, ಪ್ರವಾಸದ ಕುರಿತು ಸುಳ್ಳು ಹಾಗೂ ಮಾನಹಾನಿಕಾರಕ ಹೇಳಿಕೆ ನೀಡಿರೋ ಆರೋಪದ ಮೇಲೆ ಡಿಎಂಕೆ ಪಕ್ಷವು ನೋಟಿಸ್ ಜಾರಿ ಮಾಡಿದೆ.

ಅಣ್ಣಾಮಲೈ ತಮ್ಮ ಹೇಳಿಕೆ ವಾಪಸ್ ಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಅಂತಾ ನೋಟಿಸ್‌ನಲ್ಲಿ ಎಚ್ಚರಿಕೆ ಕೊಡಲಾಗಿದೆ.

ದುಬೈ ಎಕ್ಸ್ಪೋದಲ್ಲಿ ಭಾಗವಹಿಸಲು ಸ್ಟಾಲಿನ್ ಸದ್ಯ ಯುಎಇ ಪ್ರವಾಸದಲ್ಲಿದ್ದಾರೆ. ಆದ್ರೆ, ಈ ಭೇಟಿ ಹಿಂದೆ ವೈಯಕ್ತಿಕ ಉದ್ದೇಶಗಳು ಇವೆ ಎಂದು ಅಣ್ಣಾಮಲೈ ಆರೋಪ ಮಾಡಿದ್ದರು.

- Advertisement -

Latest News

error: Content is protected !!