Thursday, June 4, 2026
Homeಕರಾವಳಿಉಡುಪಿಕಾರ್ಕಳ: ವಿದ್ಯಾರ್ಥಿಗಳಿಗೂ ಕೊರೋನಾ ಕಾಟ, ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಗೆ ಕೊರೋನಾ ದೃಢ !

ಕಾರ್ಕಳ: ವಿದ್ಯಾರ್ಥಿಗಳಿಗೂ ಕೊರೋನಾ ಕಾಟ, ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಗೆ ಕೊರೋನಾ ದೃಢ !

- Advertisement -
- Advertisement -

ಕಾರ್ಕಳ: ಕೊರೋನಾ ಮಹಾಮಾರಿಯ ರಣಕೇಕೆ ಸದ್ಯಕ್ಕೆ ಶಾಂತವಾಗುವಂತೆ ಕಾಣುತ್ತಿಲ್ಲ. ಈಗಾಗಲೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ವಿದ್ಯಾರ್ಥಿನಿ ಮೂಲತಃ ಬಾಗಲಕೋಟೆ ತಾಲೂಕಿನ ಬಾದಾಮಿ ತಾಲೂಕಿನವಳು. ಆದರೆ ಈಕೆ ಕಾಲೇಜಿನಿಂದ ರಜೆಯಲ್ಲಿ ಮನೆಗೆ ತೆರಳಿರುವ ನಂತರ ಸೋಂಕು ಪತ್ತೆಯಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಇದರಿಂದ ಪ್ರತಿಷ್ಠಿತ ನಿಟ್ಟೆ ವಿದ್ಯಾಸಂಸ್ಥೆಯಾಗಲಿ ಅಥವಾ ಉಡುಪಿ ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.

- Advertisement -

Latest News

error: Content is protected !!