Tuesday, July 1, 2025
Homeತಾಜಾ ಸುದ್ದಿಬುದ್ಧ ಪೂರ್ಣಿಮಾ : ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಬುದ್ಧ ಪೂರ್ಣಿಮಾ : ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

spot_img
- Advertisement -
- Advertisement -

ಹೊಸದಿಲ್ಲಿ: ಬುದ್ಧ ಪೂರ್ಣಿಮಾ ಪ್ರಯುಕ್ತ ಗುರುವಾರ (ಮೇ 7) ಆಯೋಜನೆಯಾಗಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ .


ಅಂತರಾಷ್ಟ್ರೀಯ ಬೌದ್ಧ ಸಮಿತಿಯ ಸಹಯೋಗದೊಂದಿಗೆ ಸಂಸ್ಕೃತಿ ಮಂತ್ರಾಲಯ ಜಂಟಿಯಾಗಿ ಆಯೋಜಿಸಿರುವ ಕಾರ್ಯಕ್ರಮ ಇದಾಗಿದ್ದು, ಕೊರೊನಾ ವೈರಸ್‌ನ ಸಂತ್ರಸ್ತರು ಹಾಗೂ ಕೊರೊನಾ ವಾರಿಯರ್ಸ್‌ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಗತ್ತಿನ ಅನೇಕ ಬೌದ್ಧ ಸಂಘಟನೆಗಳ ಪ್ರಮುಖ ಮುಖ್ಯಸ್ಥರು ವರ್ಚ್ಯುವಲ್‌ ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಈ ಬಾರಿ ಬುದ್ಧ ಪೂರ್ಣಿಮಾ ಸಂಭ್ರಮಾಚರಣೆಯನ್ನು ವರ್ಚ್ಯುವಲ್‌ ಆಗಿ ಆಚರಿಸಲು ನಿರ್ಧರಿಸಲಾಗಿದೆ.
ಬುದ್ಧ ಪೂರ್ಣಿಮಾದ ವಿಶೇಷ ಪ್ರಾರ್ಥನೆಗಳು ನೇಪಾಳದ ಲುಂಬಿಣಿಯ ಪವಿತ್ರ ಸ್ಥಳ, ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ದೇವಸ್ಥಾನ, ಸಾರಾನಾಥದ ಮುಳಗಂದ ಕುಟಿ ವಿಹಾರ, ಖುಷಿನಗರದ ಪರಿನಿರ್ವಾಣ ಸ್ಥೂಪದಂತಹ ಪವಿತ್ರ ಸ್ಥಳಗಳು ಸೇರಿ ಶ್ರೀಲಂಕಾ, ನೇಪಾಳ, ಭಾರತ ಹಾಗೂ ವಿಶ್ವದ ಅನೇಕ ಸ್ಥಳಗಳಿಂದ ಪ್ರಾರ್ಥನೆ ನೇರ ಪ್ರಸಾರವಾಗಲಿದೆ.

- Advertisement -
spot_img

Latest News

error: Content is protected !!