Saturday, June 6, 2026
Homeಕರಾವಳಿಧರ್ಮಸ್ಥಳದ ದಿನೇಶ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ: ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ವಿತರಣೆ

ಧರ್ಮಸ್ಥಳದ ದಿನೇಶ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ: ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ವಿತರಣೆ

- Advertisement -
- Advertisement -

ಧರ್ಮಸ್ಥಳ: ಭಜರಂಗದಳ ಕಾರ್ಯಕರ್ತನಿಂದ ಹಲ್ಲೆಗೊಳಗಾಗಿ ಇತ್ತೀಚೆಗೆ ಸಾವನ್ನಪ್ಪಿದ್ದ ಧರ್ಮಸ್ಥಳದ ದಲಿತ ಯುವಕ ದಿನೇಶ್ ಅವರ ಮನೆಗೆ ಮಾಜಿ ಸಿಎಂ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿದರು.

ಕನ್ಯಾಡಿಯಲ್ಲಿರುವ ದಿನೇಶ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ‌ ಸಿದ್ದರಾಮಯ್ಯ, ಇದೇ ವೇಳೆ ವೈಯಕ್ತಿಕ ಪರಿಹಾರವಾಗಿ ಒಂದು ಲಕ್ಷ ರೂಪಾಯಿಗಳನ್ನು ಕುಟುಂಬದವರಿಗೆ ನೀಡಿದರು. ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಈ ವೇಳೆ ಹಾಜರಿದ್ದರು.

- Advertisement -

Latest News

error: Content is protected !!