Thursday, June 4, 2026
Homeತಾಜಾ ಸುದ್ದಿಶ್ರೀ ಕ್ಷೇತ್ರ ಕೊಯ್ಯೂರು ಶ್ರೀ ಪಂಚದುರ್ಗಾ ಪರಮೇಶ್ವರಿ ಜಾತ್ರೆಗೆ ಅದ್ಧೂರಿ ತೆರೆ

ಶ್ರೀ ಕ್ಷೇತ್ರ ಕೊಯ್ಯೂರು ಶ್ರೀ ಪಂಚದುರ್ಗಾ ಪರಮೇಶ್ವರಿ ಜಾತ್ರೆಗೆ ಅದ್ಧೂರಿ ತೆರೆ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಶ್ರೀ ಕ್ಷೇತ್ರ ಕೊಯ್ಯೂರು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಕೊಯ್ಯೂರು ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಜಾತ್ರೆ  ದಿ‌ನಾಂಕ 14-3-2022 ರಂದು ಆರಂಭವಾಗಿ‌ 19-3-2022 ರಂದು ಸಂಪನ್ನವಾಯಿತು.

ವೇದಮೂರ್ತಿ ನಂದಕುಮಾರ್ ತಂತ್ರಿಯವರ ನೇತೃತ್ವದಲ್ಲಿ  ಪ್ರಧಾನ ಅರ್ಚಕರಾದ ಅಶೋಕ್ ಭಾಗಿಂಣ್ಣಯರ ಮೂಲಕ 14 ಮಾರ್ಚ್ ರಂದು‌ ಆರಂಭವಾಗಿ ,ಮಾರ್ಚ್ 16ರ ರಾತ್ರಿ ಮಹಾರಥೋತ್ಸವ ನಡೆಯಿತು. 17ಮಾರ್ಚ್ ಗುರುವಾರ ಮೂಲ ಗುಂಡದಿಂದ ವೈಭವದ ಭಂಡಾರದ ‌ಮೆರವಣಿಗೆ ನಡೆದು ರಾತ್ರಿ ಕಾರ್ಣಿಕದ ದೈವಗಳಾದ ಅಕ್ಕೆರ್,ಅಂಬೆರ್,ಭೆರವ ನೇಮೋತ್ಸವ ಜರಗಿತು. ಬಳಿಕ ಬ್ರಹ್ಮವಾಹಕಾರದ ಶ್ರೀ ಪ್ರಕಾಶ್ ಹೊಳ್ಳರಿಂದ ಉತ್ಸವ ನಡೆದು ಕೊಯ್ಯೂರ ಮಾತೆ ಶ್ರೀ ಉಳ್ಳಾಲ್ತಿ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಶ್ರೀ ಹರಿಶ್ಚಂದ್ರ ಬಳ್ಳಾಲ್ ಹಾಗೂ ಕೊಯ್ಯೂರು ಗುತ್ತು ಮನೆತನದವರು ಮತ್ತು ಉಣೆಲೆ‌ಗುತ್ತು ಮನೆತನದವರು ಹಾಗೂ ಭಕ್ತಾಭಿಮಾನಿಗಳು‌ ಊರ ಮಹನೀಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!