Saturday, June 6, 2026
HomeWorldಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಇನ್ನೂ 50 ಭಾರತೀಯರು: ವಿದೇಶಾಂಗ ಸಚಿವಾಲಯ

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಇನ್ನೂ 50 ಭಾರತೀಯರು: ವಿದೇಶಾಂಗ ಸಚಿವಾಲಯ

- Advertisement -
- Advertisement -

ನವದೆಹಲಿ: ಯುದ್ಧಗ್ರಸ್ಥ ಉಕ್ರೇನ್‌ನಲ್ಲಿ ಇನ್ನೂ 50 ಮಂದಿ ಭಾರತೀಯರು ಬಾಕಿಯಾಗಿದ್ದು, ಇವರಲ್ಲಿ 15ರಿಂದ 20 ಮಂದಿ ತಾಯ್ನಡಿಗೆ ಮರಳಲು ಬಯಸುತ್ತಿದ್ದು ಅವರಿಗೆ ಎಲ್ಲ ರೀತಿಯ ನೆರವು ನೀಡಿ ಅವರನ್ನು ಕರೆತರಲಾಗುವುದು ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದು, ‘ಆಪರೇಷನ್ ಗಂಗಾ’ ಇನ್ನೂ ಚಾಲ್ತಿಯಲ್ಲಿದ್ದು, ತಾಯ್ನಡಿಗೆ ಮರಳಲು ಇಚ್ಛಿಸುವವರನ್ನು ಕರೆತರಲು ನಾವೇನು ಮಾಡಬಹುದೋ ಅದನ್ನು ಮಾಡಲಿದ್ದೇವೆ ಎಂದರು.

ಈ ವರೆಗಿನ ಮಾಹಿತಿ ಪ್ರಕಾರ 50 ಮಂದಿ ಭಾರತೀಯರು ಉಕ್ರೇನ್‌ನಲ್ಲಿದ್ದು, ಇವರಲ್ಲಿ 15ರಿಂದ 20 ಮಂದಿ ವಾಪಸಾಗಲು ಬಯಸುತ್ತಿದ್ದರೆ ಉಳಿದವರು ಸದ್ಯದ ಸ್ಥಿತಿಯಲ್ಲಿ ಹಿಂತಿರುಗುವ ಮನಸ್ಸು ಮಾಡುತ್ತಿಲ್ಲ ಎಂದಿದ್ದಾರೆ.

ಇನ್ನು ಕೇಂದ್ರ ಸರ್ಕಾರ ಉಕ್ರೇನ್‌ನಲ್ಲಿರುವ ಎಲ್ಲ ಭಾರತೀಯರ ಜತೆ ಸಂಪರ್ಕದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!