Sunday, June 7, 2026
Homeಕರಾವಳಿಮಂಗಳೂರಿನಲ್ಲಿ‌ ಅಪರಾಧಿಗಳ‌ ಪತ್ತೆಗೆ ರೆಡಿಯಾಗಿದ್ದಾಳೆ ಬಬ್ಲಿ

ಮಂಗಳೂರಿನಲ್ಲಿ‌ ಅಪರಾಧಿಗಳ‌ ಪತ್ತೆಗೆ ರೆಡಿಯಾಗಿದ್ದಾಳೆ ಬಬ್ಲಿ

- Advertisement -
- Advertisement -

ಮಂಗಳೂರು: ಮಂಗಳೂರು ನಗರದಲ್ಲಿ ಇನ್ನು ಮುಂದೆ ಅಪರಾಧ ಪತ್ತೆಯಲ್ಲಿನ ಕೆಲಸಕ್ಕೆ ಬಬ್ಲಿ ನಿಯೋಜಿಸಲ್ಪಟ್ಟಿದೆ.‌ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿನ ಶ್ವಾನ ದಳಕ್ಕೆ ಬಬ್ಲಿ ಎಂಬ ಶ್ವಾನ ಸೇರ್ಪಡೆಯಾಗಿದೆ.‌

ಬಬ್ಲಿ ಶ್ವಾನ ಬೆಂಗಳೂರಿನ ಆಡುಗೋಡಿಯಲ್ಲಿರುವ ಸಿಎಆರ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆ ತರಬೇತಿಯನ್ನು ಪಡೆದು ಮಂಗಳೂರು ನಗರಕ್ಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿದೆ.

ಪೊಲೀಸ್ ಸಿಬ್ಬಂದಿಗಳಾದ ಕುಶಾಲಪ್ಪ ಪೂಜಾರಿ ಮತ್ತು ರವಿ ಗೌಡ ಬಬ್ಲಿಯ ಹ್ಯಾಂಡ್ಲರ್ ಆಗಿದ್ದು, ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿನ ಅಪರಾಧ ಪತ್ತೆಯ ಕರ್ತವ್ಯಕ್ಕೆ ಬಬ್ಲಿಯನ್ನು ನಿಯೋಜಿಸಲಾಗುತ್ತದೆ.

- Advertisement -

Latest News

error: Content is protected !!