Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಲಾರಿ ಮೇಲೆ ಉರುಳಿದ ಮರ

ಮಂಗಳೂರಿನಲ್ಲಿ ಲಾರಿ ಮೇಲೆ ಉರುಳಿದ ಮರ

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ರಾತ್ರಿ ಮಳೆ ಸುರಿದ ಪರಿಣಾಮ ಭಾರೀ ಗಾತ್ರದ ಮರವೊಂದು ರಸ್ತೆಗೆ ಉರುಳಿದೆ.‌

ಮಂಗಳೂರು ನಗರದ ರೋಝಾರಿಯೋ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿ ಹೋಗಿದೆ. ಲಾರಿ ಮೇಲೆ ಮರ ಉರುಳಿ ಬಿದ್ದಿದ್ದು, ಮರ ಬೀಳುತ್ತಿದ್ದಂತೆ ಲಾರಿಯಿಂದ ಚಾಲಕ ಪುರುಷೋತ್ತಮ ಹಾರಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಿಗ್ಗೆ 9.15 ರ ವೇಳೆಗೆ ಘಟನೆ ಸಂಭವಿಸಿದ್ದು, ಬಿಎಸ್ ಎನ್ ಎಲ್ ಕಟ್ಟಡದ ಕಾಂಪೌಂಡ್ ಗೋಡೆ ಸಮೇತ ಮರ ಉರುಳಿ ಬಿದ್ದಿದೆ. ಮರ ಬಿದ್ದ ಕಾರಣ ರಸ್ತೆ ಬದಿ ನಿಲ್ಲಿಸಲ್ಪಟ್ಟಿದ್ದ ಲಾರಿ ಜಖಂ ಆಗಿದ್ದು, ಮರ ಬೀಳುವ ವೇಳೆ ರಸ್ತೆ ಖಾಲಿಯಾಗಿತ್ತು. ಪಾಂಡೇಶ್ವರ ಅಗ್ನಿಶಾಮಕ ದಳದಿಂದ ಮರ ತೆರವು ಕಾರ್ಯಾಚರಣೆ ನಡೆದಿದೆ.

- Advertisement -

Latest News

error: Content is protected !!