Wednesday, June 3, 2026
Homeತಾಜಾ ಸುದ್ದಿಶಿವಮೊಗ್ಗ: ಮುಂದಿನ ದಿನ ನಿಮ್ಮ ಹೆಂಡ್ತಿ, ಮಕ್ಕಳೇ ನಮ್ಮ ಟಾರ್ಗೆಟ್;  ಎಂಎಲ್‌ಸಿ ಅರುಣ್‌ಗೆ ಬೆದರಿಕೆ

ಶಿವಮೊಗ್ಗ: ಮುಂದಿನ ದಿನ ನಿಮ್ಮ ಹೆಂಡ್ತಿ, ಮಕ್ಕಳೇ ನಮ್ಮ ಟಾರ್ಗೆಟ್;  ಎಂಎಲ್‌ಸಿ ಅರುಣ್‌ಗೆ ಬೆದರಿಕೆ

- Advertisement -
- Advertisement -

ಶಿವಮೊಗ್ಗ: ಇತ್ತೀಚಿಗಷ್ಟೇ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಬೆನ್ನಲ್ಲೇ ಎಂಎಲ್‌ಸಿ ಡಿ.ಎಸ್.ಅರುಣ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಲಾಗಿದೆ.


ಹರ್ಷನ ಹತ್ಯೆ ಬಳಿಕ ಎಂಎಲ್‌ಸಿ ಡಿ.ಎಸ್.ಅರುಣ್ ಅವರು  ಕೃತ್ಯದ ಹಿಂದೆ ಮುಸ್ಲಿಮರು ಇರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.


ಇದೀಗ ಅರುಣ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಸಂದೇಶ ಪೋಸ್ಟ್ ಮಾಡಲಾಗಿದೆ. ಮುಸ್ತಾಕ್ ಅಲಿ ಹೆಸರಿನ ವ್ಯಕ್ತಿಯು ‘ನಿಮ್ಮ ತಲೇಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ. ಆದರೆ ಮುಂದಿನ ದಿನ ನಿಮ್ಮ ಹೆಂಡ್ತಿ, ಮಕ್ಕಳೇ ನಮ್ಮ ಟಾರ್ಗೆಟ್ ನೆನಪಿಡಿ. ಷಂಡ ಸರ್ಕಾರದ ಭಂಡರಂತೆ ವರ್ತಿಸುವ ಪ್ರಚಂಡರೇ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆವೊಡ್ಡಲಾಗಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಎಸ್.ಅರುಣ್ ಅವರ ಆಪ್ತ ಸಹಾಯಕ ವಾಗೀಶ್ ಎಸ್ಪಿಗೆ ದೂರು ನೀಡಿದ್ದಾರೆ. ಅಲ್ಲದೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಬೆದರಿಕೆ ಕುರಿತು ನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!