Sunday, June 7, 2026
Homeಕರಾವಳಿಉಕ್ರೇನ್ ನ ಖಾರ್ಕಿವ್ ನಲ್ಲಿ ಸಿಲುಕಿದ್ದ ಉಜಿರೆಯ ಹೀನಾ ಫಾತಿಮಾ ಸೇಫ್

ಉಕ್ರೇನ್ ನ ಖಾರ್ಕಿವ್ ನಲ್ಲಿ ಸಿಲುಕಿದ್ದ ಉಜಿರೆಯ ಹೀನಾ ಫಾತಿಮಾ ಸೇಫ್

- Advertisement -
- Advertisement -

ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಲ್ಲಿ ಸಿಲುಕಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಟಿ.ಬಿ.ಕ್ರಾಸಿನ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ನಿನ್ನೆ ಸಂಜೆ 5:30 ರ ಸುಮಾರಿಗೆ ಪೋಲಂಡ್ ಗೆ ತಲುಪಿದ್ದು ಇಮಿಗ್ರೇಷನ್ ಪೂರ್ತಿ ಮಾಡಿ ರೂಂ ನೀಡಿದ್ದು ಅದರಲ್ಲಿ ವಾಸ್ತವ್ಯ ಹೂಡಿದ್ದು ಇವರೊಂದಿಗೆ ಕರ್ನಾಟಕ ಭೂಮಿಕಾ, ಅಕ್ಷಿತಾ ಇರುವುದಾಗಿ ತಿಳಿದುಬಂದಿದೆ.

ಸದ್ಯಕ್ಕೆ ಮೂರು ಭಾರತಿಯ ವಿಧ್ಯಾರ್ಥಿಗಳು ಸುರಕ್ಷಿತವಾಗಿದ್ದು ನಿನ್ನೆ ಸಂಜೆಯಿಂದ ಯಾವುದೇ ಸಂಪರ್ಕಕಕ್ಕೆ ಸಿಕ್ಕಿರಲಿಲ್ಲ. ಮೊನ್ನೆಯಿಂದ ನಿದ್ದೆ ಊಟ ಇಲ್ಲದೆ ಸುಸ್ತಾಗಿದ್ದರು. ಹಾಗಾಗಿ ಈಗ ರೂಂ ನಲ್ಲಿ ವಿಶ್ರಾಂತಿಯಲ್ಲಿರಬೇಕು. ಇಂದು ಅಥವಾ ನಾಳೆ ವಿಮಾನದ ಮೂಲಕ ಭಾರತಕ್ಕೆ ಬರಲಿದ್ದಾರೆ ಎಂದು ತಾಯಿ ಶಹನಾ ಮಹಾ ಎಕ್ಸ್‌ಪ್ರೆಸ್‌ ಗೆ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!