Wednesday, June 3, 2026
Homeಕರಾವಳಿಸುರತ್ಕಲ್: ಆಯತಪ್ಪಿ ಐದನೆ ಮಹಡಿಯಿಂದ ಕೆಳಗೆ ಬಿದ್ದ ಅಸಿಸ್ಟೆಂಟ್ ಪ್ರೊಫೆಸರ್ - ಗಂಭೀರ ಗಾಯ

ಸುರತ್ಕಲ್: ಆಯತಪ್ಪಿ ಐದನೆ ಮಹಡಿಯಿಂದ ಕೆಳಗೆ ಬಿದ್ದ ಅಸಿಸ್ಟೆಂಟ್ ಪ್ರೊಫೆಸರ್ – ಗಂಭೀರ ಗಾಯ

- Advertisement -
- Advertisement -

ಸುರತ್ಕಲ್: ಐದನೆ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಅಸಿಸ್ಟೆಂಟ್ ಪ್ರೊಫೆಸರೊಬ್ಬರು ಗಂಭೀರ ಗಾಯಗೊಂಡ ಘಟನೆ ಮುಕ್ಕ ಬಳಿ ನಡೆದಿದೆ. ಗಾಯಗೊಂಡವರನ್ನು ಎನ್ಐಟಿಕೆಯ ಅಸಿಸ್ಟೆಂಟ್ ಪ್ರೊಫೆಸರ್ ಮನೀಶ್ ಕುಮಾರ್ (36) ಎಂದು ಗುರುತಿಸಲಾಗಿದೆ.

ಮೂಲತಃ ಉತ್ತರ ಪ್ರದೇಶ ದವಾರಿಯಾ ಜಿಲ್ಲೆಯವರಾದ ಅಶೋಕ್ ಕುಮಾರ್ ಎಂಬವರ ಪುತ್ರನಾಗಿರುವ ಮನೀಶ್ ಕುಮಾರ್ ಬುಧವಾರ ಸಂಜೆ ಸುಮಾರು 5:30ಕ್ಕೆ ಮುಕ್ಕದ ಬಾಡಿಗೆ ಮನೆಯ ಐದನೆ ಮಹಡಿಯಲ್ಲಿ ಏರ್‌ಟೆಲ್ ಡಿಶ್ ಜೋಡಿಸುವ ವೇಳೆ ಆಯತಪ್ಪಿ ಫೈಬರ್ ಶೀಟ್‌ಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!