Wednesday, June 3, 2026
Homeತಾಜಾ ಸುದ್ದಿಜಾಮೀನು‌ ಸಿಕ್ಕರೂ ನಟ ಚೇತನ್‌ಗಿಲ್ಲ‌ ಬಿಡುಗಡೆ ಭಾಗ್ಯ

ಜಾಮೀನು‌ ಸಿಕ್ಕರೂ ನಟ ಚೇತನ್‌ಗಿಲ್ಲ‌ ಬಿಡುಗಡೆ ಭಾಗ್ಯ

- Advertisement -
- Advertisement -

ಬೆಂಗಳೂರು:   ಅವಹೇಳನಕಾರಿ‌ ಟ್ವೀಟ್ ಮಾಡಿದ ಆರೋಪದಲ್ಲಿ‌  ಬಂಧನಕ್ಕೊಳಗಾಗಿದ್ದ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಕುಮಾರ್ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ನಟ ಚೇತನ್ ಕುಮಾರ್ ಅವರಿಗೆ 32ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದ್ದರೂ ಬಿಡುಗಡೆ ಭಾಗ್ಯ ಇಲ್ಲ.

ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯೊಂದಿಗೆ ನ್ಯಾಯಾಲಯ ನಟ ಚೇತನ್ ಅವರಿಗೆ ಜಾಮೀನು ನೀಡಲಾಗಿದ್ದರೂ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣಕ್ಕೆ ಇನ್ನೂ ಎರಡು ದಿನ ಜೈಲಿನಲ್ಲೇ ಕಳಿಯಬೇಕಿದೆ.

ನಾಳೆ ನಾಲ್ಕನೇ ಶನಿವಾರ, ಬಳಿಕ ಭಾನುವಾರ ರಜೆ ಹಿನ್ನಲೆ ರಜೆ ಬಂದಿದೆ. ಒಂದು ಲಕ್ಷ ಬಾಂಡ್ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ. ಸೋಮವಾರ ಬಾಂಡ್ ಪ್ರಕ್ರಿಯೆ ಪೂರೈಸಿದ ಬಳಿಕ ಪರಪ್ಪನ‌ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ದ ಅವಹೇಳನಕಾರಿ ಟ್ವೀಟ್ ಹಿನ್ನಲೆ ಕೇಸ್ ದಾಖಲಾಗಿತ್ತು. ಸುಮೋಟೊ ಪ್ರಕರಣ ದಾಖಲಿಸಿ ನಟ ಚೇತನ್ ಅವರನ್ನು ಬಂಧಿಸಿದ್ದರೆ ಚೇತನ್ ಪತ್ನಿ ಪತಿ ಕಾಣೆಯಾಗಿದ್ದಾರೆ ಎಂದು ದೂರು ಕೊಟ್ಟಿದ್ದರು.

- Advertisement -

Latest News

error: Content is protected !!