Friday, June 5, 2026
Homeಅಪರಾಧಬೆಳ್ತಂಗಡಿ ಕಾಲೇಜ್ ವಿದ್ಯಾರ್ಥಿ ನಾಪತ್ತೆ ಪ್ರಕರಣ: ಉಡುಪಿ ಜಿಲ್ಲೆಯಲ್ಲಿ ಪತ್ತೆ.

ಬೆಳ್ತಂಗಡಿ ಕಾಲೇಜ್ ವಿದ್ಯಾರ್ಥಿ ನಾಪತ್ತೆ ಪ್ರಕರಣ: ಉಡುಪಿ ಜಿಲ್ಲೆಯಲ್ಲಿ ಪತ್ತೆ.

- Advertisement -
- Advertisement -

ಬೆಳ್ತಂಗಡಿ: ಮಡಂತ್ಯಾರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ್ ಎಂಬ ಬಾಲಕ ಫೆ.21 ರಂದು ಕಾಲೇಜಿಗೆಂದು ಹೋದವರು ಕಾಲೇಜಿಗೂ ಹೋಗದೆ, ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದ.

ಇಂದು ಬೆಳಗ್ಗೆ ಉಡುಪಿ ಜಿಲ್ಲೆಯಲ್ಲಿ ಕಾರಿನ ಪಕ್ಕ ಕುಳಿತು ಅಳುತ್ತಿದ್ದ, ಸಾರ್ವಜನಿಕರು ವಿಚಾರಿಸಿದಾಗ ಮನೆ ಬಿಟ್ಟು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದು ,ಅದರಂತೆ ಮನೆಯವರಿಗೆ ಮಾಹಿತಿ ಕೊಟ್ಟಿದ್ದು ಸಂಬಂಧಿಕರೊಬ್ಬರು ಬಾಲಕನನ್ನು ಕಇಂದು ಬೆಳಗ್ಗೆ ಉಡುಪಿ ಜಿಲ್ಲೆಯಲ್ಲಿ ಕಾರಿನ ಪಕ್ಕ ಕುಳಿತು ಅಳುತ್ತಿದ್ದ ಬಾಲಕನನ್ನು ಸಾರ್ವಜನಿಕರು ವಿಚಾರಿಸಿದಾಗ, ಮನೆ ಬಿಟ್ಟು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದು ,ಅದರಂತೆ ಸ್ಥಳೀಯರು ಮನೆಯವರಿಗೆ ಮಾಹಿತಿ ಕೊಟ್ಟಿದ್ದು ,ಸಂಬಂಧಿಕರೊಬ್ಬರು ಬಾಲಕನನ್ನು ಕರೆತರುತ್ತಿದ್ದು ಇಲ್ಲಿಂದ ಮನೆಯವರು ಕೂಡ ಉಡುಪಿಗೆ ಪ್ರಯಾಣ ಬೆಳೆಸಿದ್ದಾರೆ ವೈರ್ನ್ದು ತಿಳಿದು ಬಂದಿದೆ.

ಘಟನೆ ವಿವರ : ಬೆಳಾಲು ನಿವಾಸಿಯಾಗಿರುವ ಜೆರಾಲ್ಡ್ ಡಿ’ಸೋಜಾ ಮತ್ತು ಪ್ರಮೀಳಾ ದಂಪತಿ ಪುತ್ರ ಪ್ರಥಮ್ ರವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಫೆ.21 ರಂದು ಮನೆಯಿಂದ ಕಾಲೇಜಿಗೆಂದು ತೆರಳಿದವರು, ತರಗತಿಗೂ ಹಾಜರಾಗದೆ, ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ತಮ್ಮ ಮಗನನ್ನು ಪತ್ತೆ ಮಾಡಿಕೊಡುವಂತೆ ವಿದ್ಯಾರ್ಥಿಯ ಹೆತ್ತವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ಪ್ರಕರಣ ಸುಖಾಂತಗೊಂಡಿದ್ದು ಧರ್ಮಸ್ಥಳ ಠಾಣೆಗೆ ಕರೆದುಕೊಂಡು ಬಂದು ವಿಚಾರ ನಡೆಸಿದ ಮೇಲೆ ನಾಪತ್ತೆಗೆ ಕಾರಣ ಸಿಗಬಹುದಾಗಿದೆ.

- Advertisement -

Latest News

error: Content is protected !!