Thursday, June 4, 2026
Homeತಾಜಾ ಸುದ್ದಿಬೆಳ್ತಂಗಡಿ: ಪದ್ಮುಂಜ ಗೇರು ತೋಟಕ್ಕೆ ಬೆಂಕಿ

ಬೆಳ್ತಂಗಡಿ: ಪದ್ಮುಂಜ ಗೇರು ತೋಟಕ್ಕೆ ಬೆಂಕಿ

- Advertisement -
- Advertisement -

ಬೆಳ್ತಂಗಡಿ: ಪದ್ಮುಂಜ ಜೂನಿಯರ್ ಕಾಲೇಜು ಹಿಂಬದಿ ಪ್ರದೇಶದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ದ ಗೇರು ತೋಟಕ್ಕೆ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಘಟನೆ ಫೆ 22 ರಂದು ನಡೆದಿದೆ.


ನೂರಾರು ಪಸಲು ಕೊಡುವ ಗೇರು ಮರಗಳು ಸುಟ್ಟು ಕರಗಲಾಗಿವೆ.ಯಾರೋ ದಾರಿ ಹೋಕರು ಸಿಗರೇಟು ಸೇವನೆ ಮಾಡಿ ಬಿಸಾಡಿದ ತುಂಡಿ ನಿಂದ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದೆ.ನೆರೆಮನೆಯ ಹಂಝತ್ ಪದ್ಮುಂಜ ಸಿರಾಜುದ್ದೀನ್ ಸ ಅದಿ ಪದ್ಮುಂಜ ಖಲಂದರ್ ಪದ್ಮುಂಜ ಸೇರಿದಂತೆ ಮಹಿಳೆಯರು ಸೇರಿ ಬೆಂಕಿ ನಂದಿಸಲು ಹರ ಸಹಾಸ ಪಟ್ಟರು

ವಿಷಯ ತಿಳಿದ ಗೇರು ಅಭಿವೃದ್ಧಿ ನಿಗಮದ ವಾಚರ್ ಕಾವಲು ಗಾರ ಸುಂದರ ಶೆಟ್ಟಿ ಯವರು ಬೇರೆ ಬೇರೆ ಕಡೆಗಳಿಂದ ಜನರನ್ನು ಕರೆಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.

- Advertisement -

Latest News

error: Content is protected !!