Thursday, June 4, 2026
Homeಕರಾವಳಿಮಂಗಳೂರು: ಪಂಜಿಮೊಗರು ಪ್ರಾರ್ಥನಾ ಕೇಂದ್ರ ಧ್ವಂಸ ಪ್ರಕರಣ, ಇಬ್ಬರ ಬಂಧನ

ಮಂಗಳೂರು: ಪಂಜಿಮೊಗರು ಪ್ರಾರ್ಥನಾ ಕೇಂದ್ರ ಧ್ವಂಸ ಪ್ರಕರಣ, ಇಬ್ಬರ ಬಂಧನ

- Advertisement -
- Advertisement -

ಮಂಗಳೂರು: ಪಂಜಿಮೊಗರು ಪ್ರಾರ್ಥನಾ ಕೇಂದ್ರವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಬಜ್ಪೆ ನಿವಾಸಿ ಲತೀಶ್ (28) ಮತ್ತು ಕೋಡಿಕಲ್ ನಿವಾಸಿ ಧನಂಜಯ್ (36) ಎಂದು ಗುರುತಿಸಲಾಗಿದೆ.

ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಬ್ಬರಲ್ಲಿಯೂ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.5ರಂದು ಕುಳೂರಿನ ಸೈಂಟ್ ಆಂಟೋನಿ ಚರ್ಚ್ ನಡೆಸುತ್ತಿದ್ದ ಪ್ರಾರ್ಥನಾ ಕೇಂದ್ರ ಕಟ್ಟಡವನ್ನು ನೆಲಸಮಗೊಳಿಸಲಾಗಿದ್ದು, ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಶ್ರೀ ಸತ್ಯ ಕೊರ್ದ್ದಬ್ಬು ಸೇವಾ ಸಮಿತಿ ಪ್ರಾರ್ಥನಾ ಕೇಂದ್ರದ ಆವರಣಕ್ಕೆ ನುಗ್ಗಿ ಕಟ್ಟಡವನ್ನು ಕೆಡವಲಾಗಿದೆ ಎಂದು ಆರೋಪಿಸಲಾಗಿದೆ.

- Advertisement -

Latest News

error: Content is protected !!