Wednesday, June 3, 2026
Homeತಾಜಾ ಸುದ್ದಿಕಾರ್ಕಳ: ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೊಬ್ಬರಿಗೆ ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ

ಕಾರ್ಕಳ: ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೊಬ್ಬರಿಗೆ ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ

- Advertisement -
- Advertisement -

ಕಾರ್ಕಳ: ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೊಬ್ಬರಿಗೆ ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆಗೈದ ಘಟನೆ ಬೋಳ ಮಹಾಲಚ್ಚಿಲ್ ಎಂಬಲ್ಲಿ ನಡೆದಿದೆ. ದಿನೇಶ್ ಆಚಾರ್ಯ ಪ್ರಕರಣದ ಆರೋಪಿತನಾಗಿದ್ದು, ಶಿವರಾಮ್ ಆಚಾರ್ಯ ಹಲ್ಲೆಗೊಳಗಾದವರು.

ಶಿವರಾಮ್ ಆಚಾರ್ಯ ಅವರ ತಂದೆ ಹೊನ್ನಯ್ಯ ಆಚಾರ್ಯ ಎಂಬವರಿಗೆ ಇಬ್ಬರು ಹೆಂಡತಿಯರು. ಅವರಲ್ಲಿ ಮೊದಲನೆಯ ಪತ್ನಿಯ ಮಗ ವಿಶ್ವನಾಥ ಆಚಾರ್ಯರವರ ಮಗ ದಿನೇಶ್ ಆಚಾರ್ಯ.

ತಂದೆ ವಿಶ್ವನಾಥ ಆಚಾರ್ಯ ಮೃತಪಟ್ಟ ಬಳಿಕ ದಿನೇಶ್ ಆಚಾರ್ಯನು ಜಾಗದ ವಿಚಾರದಲ್ಲಿ ಶಿವರಾಮ ಆಚಾರ್ಯ ಅವರಲ್ಲಿ ಪ್ರತಿದಿನ ಗಲಾಟೆ ನಡೆಸುತ್ತಿದ್ದನಂತೆ. ಶಿವರಾಮ್ ಆಚಾರ್ಯ ಅವರಿಗೆ ಸೇರಿರುವ ಪಟ್ಟಾ ಜಾಗದಲ್ಲಿ ದಿನೇಶ ಆಚಾರ್ಯ ದಾರಿಗೆ ಕಲ್ಲನ್ನು ಅಡ್ಡ ಇರಿಸಿದ. ಇದರಿಂದ ನಡೆದಾಡುವುದಕ್ಕೆ ಅಡ್ಡಿ ಉಂಟಾಗುತ್ತಿರುವುದರಿಂದ ಕಲ್ಲನ್ನು ತೆಗೆಯುವಂತೆ ದಿನೇಶ್ ಆಚಾರ್ಯನಲ್ಲಿ ಶಿವರಾಮ ಆಚಾರ್ಯ ತಿಳಿಸಿದ್ದರು. ಅದಕ್ಕೆ ಒಪ್ಪದೇ ಇದ್ದುದರಿಂದ ಶಿವರಾಮ ಆಚಾರ್ಯ ಅವರು ನೆರೆಕರೆಯವರೊಂದಿಗೆ ಸೇರಿ ಕಲ್ಲನ್ನು ತೆಗೆಯಲು ಮುಂದಾದಾಗ ಆರೋಪಿ ದಿನೇಶ್ ಆಚಾರ್ಯ ಹಲ್ಲೆ ಗೈದು ಜೀವಬೆದರಿಕೆಯೊಡ್ಡಿದ್ದಾನೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ

- Advertisement -

Latest News

error: Content is protected !!