Wednesday, June 3, 2026
Homeಅಪರಾಧಅಹಮದಾಬಾದ್‌‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣ- 38 ಮಂದಿಗೆ ಗಲ್ಲು ಶಿಕ್ಷೆ

ಅಹಮದಾಬಾದ್‌‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣ- 38 ಮಂದಿಗೆ ಗಲ್ಲು ಶಿಕ್ಷೆ

- Advertisement -
- Advertisement -

ನವದೆಹಲಿ: 2008ರ ಅಹಮದಾಬಾದ್‌‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ 49 ಅಪರಾಧಿಗಳಲ್ಲಿ 38 ಮಂದಿ ಮರಣದಂಡನೆ ವಿಧಿಸಿ ಗುಜರಾತ್‌‌ನ ವಿಶೇಷ ನ್ಯಾಯಾಲಯ ಶುಕ್ರವಾರ ಶಿಕ್ಷೆ ವಿಧಿಸಿದ್ದು, ಉಳಿದ 11 ಮಂದಿಗೆ ಸಾಯುವವರೆಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇಂದು ಗುಜರಾತ್‌ನ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, ಅಪರಾಧಿಗಳು ಅಹಮದಾಬಾದ್, ಭೋಪಾಲ್, ಗಯಾ, ಬೆಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿನ ಜೈಲುಗಳಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

ಇನ್ನು 2008 ರ ಜುಲೈ 26 ರಂದು ಅಹಮದಾಬಾದ್​ ನಗರದಲ್ಲಿ ಸರಣಿ ಸ್ಫೋಟ ನಡೆದಿದ್ದು, ಅದರಲ್ಲಿ 56 ಜನರು ಮೃತಪಟ್ಟು, 200 ಕ್ಕೂಅಧಿಕ ಮಂದಿ ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಫೆಬ್ರವರಿ 8, 2022 ರಂದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.

- Advertisement -

Latest News

error: Content is protected !!