Sunday, June 7, 2026
Homeತಾಜಾ ಸುದ್ದಿಕಡಬ: ಅಕ್ರಮ ಗೋಸಾಗಾಟ- ಆರೋಪಿಗಳು ಪೋಲೀಸರ ವಶಕ್ಕೆ

ಕಡಬ: ಅಕ್ರಮ ಗೋಸಾಗಾಟ- ಆರೋಪಿಗಳು ಪೋಲೀಸರ ವಶಕ್ಕೆ

- Advertisement -
- Advertisement -

ಕಡಬ: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ಕಡಬದಲ್ಲಿ ನಡೆದಿದೆ. ಆರೋಪಿಗಳನ್ನು ರವಿ ಹಾಗೂ ಅಬ್ದುಲ್ ಅಝೀಝ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಕುಟ್ರುಪಾಡಿ ಗ್ರಾಮದ ಕೇಪು ಎಂಬಲ್ಲಿ ಪಿಕಪ್ ವಾಹನದಲ್ಲಿ ಜಾನುವಾರೊಂದನ್ನು ನೆಲ್ಯಾಡಿ ಕಡೆಗೆ ಸಾಗಿಸುತ್ತಿದ್ದ ಸಂದರ್ಭ ಗಸ್ತುನಿರತ ಹೊಯ್ಸಳ ಪೊಲೀಸರು ಪಿಕಪ್ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!